ಮುಂದಿನ ವರ್ಷ ಭಾರತಕ್ಕೆ ಬರಲಿದೆ EV ದಿಗ್ಗಜ ಟೆಸ್ಲಾ? ಗುಜರಾತ್ ನಲ್ಲಿ ಮೊದಲ ಉತ್ಪಾದನಾ ಘಟಕ ಸ್ಥಾಪನೆ ಸಾಧ್ಯತೆ

ಅಹಮದಾಬಾದ್: ಟೆಸ್ಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಮತ್ತು ಅದರ ಮೊದಲ ಉತ್ಪಾದನಾ ಘಟಕವು ಮುಂದಿನ ವರ್ಷ ಗುಜರಾತ್‌ನಲ್ಲಿ ಸ್ಥಾಪನೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಭಾರತದಲ್ಲಿ EV ತಯಾರಕರ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತದಲ್ಲಿವೆ ಮತ್ತು ಮಾಧ್ಯಮ ವರದಿಗಳ ಪ್ರಕಾರ ಶೀಘ್ರದಲ್ಲೇ ಒಂದು ತೀರ್ಮಾನವನ್ನು ತಲುಪುವ ಸಾಧ್ಯತೆಯಿದೆ. ರಾಜ್ಯದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕುರಿತು ಪ್ರಕಟಣೆಯು ಮುಂಬರುವ “ವೈಬ್ರೆಂಟ್ ಗುಜರಾತ್” ಶೃಂಗಸಭೆಯಲ್ಲಿ ನಡೆಯಲಿದ್ದು, ಇದು ಜನವರಿ 2024 ರಲ್ಲಿ ನಡೆಯಲಿದೆ ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.

ವರದಿಯ ಪ್ರಕಾರ, ಟೆಸ್ಲಾ ಉತ್ಪಾದನಾ ಘಟಕದ ಸಂಭವನೀಯ ಸ್ಥಳವು ಸಾನಂದ್, ಬೆಚರಾಜಿ ಮತ್ತು ಧೋಲೆರಾ ಆಗಿರಬಹುದು. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರ ಅಥವಾ ಇವಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.