ಕಲ್ಯಾಣಪುರ: ಇಲ್ಲಿನ 71 ವರ್ಷದ ಓವೆನ್ ರೋಡಿಗ್ರೆಸ್ ಎಂಬವರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ತಮ್ಮದೇ ಕಲ್ಪನೆಯಲ್ಲಿ ಏಸು ಕ್ರಿಸ್ತನ ಜನ್ಮದಿನವನ್ನು ಆಚರಿಸುತ್ತಿದ್ದಾರೆ.
ಈ ಬಾರಿ ವಿಶೇಷ ಆಕರ್ಷಣೆಯಾಗಿ ರೈಲು ಬಂಡಿಯಲ್ಲಿ ಸಂತ ಮೋಟಿವ್ ರಚನೆ ಮಾಡಿದ್ದು ಇಲ್ಲಿನ ಧರ್ಮ ಗುರುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇವರ ಪ್ರತಿಭೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ 10 ವರ್ಷಗಳಿಂದ ಥರ್ಮಾಕೋಲ್ ಶೀಟ್ ಬಳಸಿ ವಿವಿಧ ಬಣ್ಣ ಬಳಿದು ಏಸು ಕ್ರಿಸ್ತನ ಜೀವನ ಚರಿತ್ರೆಯ ಕಲಾಕೃತಿಗಳನ್ನು ಮನೆಯ ಆವರಣದಲ್ಲಿ ಪ್ರದರ್ಶಿಸಿದ್ದಾರೆ.
ಏಸುವಿನ ಜನ್ಮಸ್ಥಳ ಕಥಾ ಚಿತ್ರಣ, ಒಂಟೆ, ಕುದುರೆ, ಕುರಿಗಳ, ಪಿರಮಿಡ್ , ಬೈಕ್, ಹೆಲಿಕ್ಯಾಪಟರ್ ಮೇಲೆ ಸಂತಕ್ಲಾಸ್ ರೀತಿಯ ವಿವಿಧ ಕಲಾ ಕೃತಿ ರಚಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.