84 ಸೆಕೆಂಡ್‌ಗಳ ಸೂಕ್ಷ್ಮ ಕ್ಷಣದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ: ರಾಮನ ಆಗಮನದ ಮಂಗಳಕರ ಮುಹೂರ್ತದಿಂದ ಸುಖ ಸಮೃದ್ದಿ

ಅಯೋಧ್ಯೆ: 84 ಸೆಕೆಂಡ್‌ಗಳ ಸೂಕ್ಷ್ಮ ಕ್ಷಣದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. 84 ಸೆಕೆಂಡ್‌ಗಳ ಈ ಕ್ಷಣವು ಅತ್ಯಂತ ಮಂಗಳಕರವಾಗಿದ್ದು ಇದು ಭಾರತಕ್ಕೆ ಜೀವರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಶುಭ ಮುಹೂರ್ತವನ್ನು ಕಾಶಿಯ ಪಂಡಿತರು ನಿರ್ಧರಿಸಿದ್ದಾರೆ. ಮೂಲ ಮುಹೂರ್ತವು ಜನವರಿ 22 ರಂದು ನಡು ಮಧ್ಯಾಹ್ನ 12:29: 8 ಸೆಕೆಂಡುಗಳಿಂದ ಪ್ರಾರಂಭವಾಗುತ್ತದೆ. ಇದು 12:30 ನಿಮಿಷ 32 ಸೆಕೆಂಡುಗಳವರೆಗೆ ಇರುತ್ತದೆ. ಅಂದರೆ ಸುಮಾರು 1 ನಿಮಿಷ 24 ಸೆಕೆಂಡ್‌ಗಳಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಲಿದೆ. ಆದರೆ, ಪ್ರಾಣಪ್ರತಿಷ್ಠೆಗೂ ಮುನ್ನ ಯಾಗ, ಹವನ, ನಾಲ್ಕು ವೇದ ಪಾರಾಯಣ, ಒಂದು ಗಂಟೆ ಕಾಲ ವಿಧಿವಿಧಾನಗಳ ಪಾರಾಯಣ ನಡೆಯಲಿದೆ.

ಈ ಬಾರಿಯ ಪ್ರಾಣ ಪ್ರತಿಷ್ಠೆಯನ್ನು ವಿದ್ವಾಂಸರು ಮತ್ತು ಜ್ಯೋತಿಷಿಗಳು ಬಹಳ ಮಂಗಳಕರವೆಂದು ಬಣ್ಣಿಸಿದ್ದಾರೆ. ಈ ಮುಹೂರ್ತದ 16 ರಲ್ಲಿ 10 ಗುಣಗಳು ಒಳ್ಳೆಯದು ಎಂದು ಹೇಳಲಾಗುತ್ತಿದೆ. 1 ನಿಮಿಷ 24 ಸೆಕೆಂಡ್‌ಗಳ ಈ ಮುಹೂರ್ತದಲ್ಲಿ ಅಭಿಜೀತ್ ಮುಹೂರ್ತ ನಡೆಯಲಿದ್ದು, ಇದರಲ್ಲಿ ರಾಮಲಲ್ಲಾ ನ ಪ್ರಾಣಪ್ರತಿಷ್ಠೆಯಿಂದ ರಾಜ್ಯದಲ್ಲಿ ಸುಭಿಕ್ಷೆ ನೆಲೆಸುವುದು. ಆದ್ದರಿಂದ ಈ ಸೂಕ್ಷ್ಮ ಕ್ಷಣವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಜನವರಿ 16 ರಂದು ಸರಯು ಯಾತ್ರೆ ನಡೆಯಲಿದೆ. ಜನವರಿ 17 ರಂದು ಗಣೇಶ ಪೂಜೆಯೊಂದಿಗೆ ಪ್ರಾಣ ಪ್ರತಿಷ್ಠೆ ಸಮಾರಂಭ ಆರಂಭವಾಗಲಿದೆ.

ಅಯೋಧ್ಯೆ ನಗರವು ರಾಮಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ. ರಾಮಮಂದಿರದ ಪ್ರತಿಷ್ಠಾಪನೆಯು ಭಾರತದ ಅತಿದೊಡ್ಡ ಧಾರ್ಮಿಕ ಆಚರಣೆಯಾಗಿದೆ. ದೇವಾಲಯದ ಸುರಕ್ಷತೆ ಮತ್ತು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು, ದೇವಾಲಯದಲ್ಲಿ ದರ್ಶನವನ್ನು ಮೂರು ದಿನ ಮುಚ್ಚಲಾಗುತ್ತದೆ. ಅಂದರೆ ಜನವರಿ 20 ರಿಂದ ಜನವರಿ 22 ರವರೆಗೆ ಸಾರ್ವಜನಿಕರು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ. ಜನವರಿ 23 ರಿಂದ ಎಲ್ಲರಿಗೂ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.