ಮೂಡಬಿದ್ರೆ: ಜನವರಿ 5-6 ರಂದು ಕುಪ್ಮಾ ವತಿಯಿಂದ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024

ಮೂಡಬಿದ್ರೆ: ಜನವರಿ 5 ಮತ್ತು 6 ರಂದು ಆಳ್ವಾಸ್ ಕಾಲೇಜಿನಲ್ಲಿ ಕರ್ನಾಟಕ ಅನುದಾನರಹಿತ ಪದವಿ ಪೂರ್ವಕಾಲೇಜು ಆಡಳಿತ ಮಂಡಳಿಗಳ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ‘ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024’ ಎಂಬ ವಿಷಯದ ಮೇಲೆ ಎರಡು ದಿನಗಳ ಸಮಾವೇಶವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ವಿವರ:

ಜನವರಿ 5 ಶುಕ್ರವಾರ ಬೆಳಿಗ್ಗೆ 11.30 ರಿಂದ 12.30 ರವರೆಗೆ ನೋಂದಣಿ, ಮಧ್ಯಾಹ್ನ 12.30 ರಿಂದ 2 ರ ವರೆಗೆ ಊಟ ಮತ್ತು ನೆಟ್‌ವರ್ಕಿಂಗ್, ಮಧ್ಯಾಹ್ನ 2 ರಿಂದ 4 ರವರೆಗೆ ಉದ್ಘಾಟನಾ ಅಧಿವೇಶನ, ಸಂಜೆ 4 ರಿಂದ ಮೊದಲ ಪ್ಯಾನಲ್‌ ಚರ್ಚೆ (ವಿಷಯ: ಕುಪ್ಮಾದ ಗುರಿ ಮತ್ತು ಉದ್ದೇಶಗಳು), ಎರಡನೆಯ ಅಧಿವೇಶನ ಸಂಜೆ 5.30 ರಿಂದ 7.30 ರವರೆಗೆ ಪ್ಯಾನಲ್‌ಚರ್ಚೆ (ವಿಷಯ: ನಿಮ್ಮ ಜಿಲ್ಲೆಯಲ್ಲಿ ಕುಪ್ಮಾದ ಬಲವಾದ ಸಂಘವನ್ನು ನಿರ್ಮಿಸುವುದು), 7.45 ಕ್ಕೆ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮವೂ ನಡೆಯಲಿದೆ.

ಜನವರಿ 6 ಶನಿವಾರ ಬೆಳಿಗ್ಗೆ 9.30 ರಿಂದ 10.30 ರವರೆಗೆ ಪ್ಯಾನಲ್‌ ಚರ್ಚೆ (ವಿಷಯ: ಖಾಸಗಿ ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು) ಮತ್ತು 11 ರಿಂದ 12.30 ರವರೆಗೆ ಪ್ಯಾನಲ್‌ ಚರ್ಚೆ (ವಿಷಯ: ರಾಷ್ಟ್ರನಿರ್ಮಾಣದಲ್ಲಿ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಾತ್ರ) ಈ ಎಲ್ಲಾ ವಿಷಯಗಳ ಮೇಲೆ ಸಂಪನ್ಮೂಲ ವ್ಯಕ್ತಿಗಳು ವಿಷಯಗಳ ಮಂಡನೆ ಮಾಡಲಿದ್ದು ಅದರೊಂದಿಗೆ ಸಂವಾದ ಮತ್ತು ಮುಕ್ತವಾದ ಚರ್ಚೆ ನಡೆಯಲಿದೆ.

ಈ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷರು/ಸಂಚಾಲಕರು/ಕಾರ್ಯದರ್ಶಿಗಳು/ಸದಸ್ಯರು ಸೇರಿದಂತೆ ಎಲ್ಲರೂ ಭಾಗವಹಿಸುವಂತೆ ಮತ್ತು ಪ್ರತಿನಿಧಿಗಳಿಗೆ ಮೂಲಭೂತ ಸೌಕರ್ಯವನ್ನು ಹೊಂದಿರುವ ವಸತಿ ಸೌಲಭ್ಯವನ್ನು ಇಚ್ಛಿಸಿದ್ದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಕುಪ್ಮಾದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾವೇಶದ ನೋಂದಣಿಗಾಗಿ ಲಿಂಕ್:
https://kupma.org/pre-university-education-open-conclave-2024