ಈ ಡ್ರೈ ಫ್ರೂಟ್ಸ್ ಗಳ ಉಪಯೋಗ ಗೊತ್ರಾದ್ರೆ ನೀವಿದನ್ನ ಮಿಸ್ ಮಾಡದೇ ತಿಂತೀರಿ !:ಇಲ್ಲಿದೆ ಡಾಕ್ಟರ್ ಕೊಟ್ಟ ಟಿಪ್ಸ್

ಡ್ರೈ ಫ್ರೂಟ್ಸ್ ಅಂದ್ರೆ ಸಾಧಾರಣವಾಗಿ  ಎಲ್ಲರಿಗೂ ಇಷ್ಟ. ಬಗೆ ಬಗೆಯ ಡ್ರೈ ಫ್ರೂಟ್ಸ್ ಗಳನ್ನು  ಮಿತವಾಗಿ ಬಳಸಿದರೆ ಆರೋಗ್ಯವೂ ಸೂಪರ್ ಆಗಿರುತ್ತದೆ.ಇದರಲ್ಲಿ  ಪೋಷಕಾಂಶ ಅಧಿಕವಿರುವುದರಿಂದ ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಇಲ್ಲಿ ಆರು ಡ್ರೈ ಫ್ರೂಟ್ಸ್ ಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಉಪಯೋಗಗಳ ಬಗ್ಗೆ ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ತಿಳಿಸಿದ್ದಾರೆ.

              ಬಾದಾಮಿ

 

ಇದರಲ್ಲಿ ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಇ, ಮೆಗ್ನೇಷಿಯಂ ಅಧಿಕವಿರುತ್ತದೆ. ಇದರಲ್ಲಿ ಝೀರೋ ಕೊಲೆಸ್ಟ್ರಾಲ್. ಅಂದರೆ ಕೊಲೆಸ್ಟ್ರಾಲ್ ವಿರುವುದಿಲ್ಲ. ನಮ್ಮ ಚರ್ಮ ಹಾಗೂ ಕೂದಲಿಗೆ ಬಾದಾಮ್  ಒಳ್ಳೆಯದು .

ಗೇರು ಬೀಜ-

 ಇದರಲ್ಲಿ ಐಎನ್, ಮ್ಯಾಗ್ನೇಷಿಯಂ ಅಧಿಕವಿರುತ್ತದೆ . ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ ಹಾಗೂ ನಮ್ಮ ಮೂಳೆಗಳನ್ನು ಸದೃಢಗೊಳಿಸುತ್ತದೆ. ಇದು ನಮ್ಮ ಚರ್ಮಕ್ಕೆ ಹಾಗೂ ಹೃದಯಕ್ಕೆ ಒಳ್ಳೆಯದು .ಇದರಲ್ಲಿ ವಿಟಮಿನ್ಬಿಹಾಗು ಇ ಅಧಿಕವಿರುತ್ತದೆ .

ವಾಲ್ನಟ್-

 

ಇದರಲ್ಲಿ ಒಮೆಗಾ ೩ಫ್ಯಾಟಿ ಆಸಿಡ್ಸ್ ಅಧಿಕವಿರುತ್ತದೆ. ನಮ್ಮ ಹೃದಯ ಹಾಗೂ ಮಸ್ತಿಷ್ಕಕ್ಕೆ ಒಳ್ಳೆಯದು. ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ .ಡಿಪ್ರೆಷನ್ ಅನ್ನು ಕಡಿಮೆಗೊಳಿಸುತ್ತದೆ. ಇಳಿ ವಯಸ್ಸಿನಲ್ಲಿ ಬರುವಂತಹ ಮಾನಸಿಕ ಕಾಯಿಲೆಗಳನ್ನು( ಮರೆಗುಳಿತನ) ತಡೆಯುತ್ತದೆ. ನಮ್ಮಇಮ್ಯೂನಿಟಿ ಹಾಗೂ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ.

ಪಿಸ್ತಾ 

ಇದರಲ್ಲಿ ಪ್ರೋಟೀನ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಅಧಿಕವಿರುತ್ತದೆ.ಇದು ನಮ್ಮ ಬಿಪಿ ಹಾಗೂ ಹೃದಯ ರೋಗಗಳನ್ನು ತಡೆಯುತ್ತದೆ.

 ಒಣ ದ್ರಾಕ್ಷಿ-

ಇದರಲ್ಲಿ ವಿಟಮಿನ್ಸ್, ಪ್ರೊಟೀನ್ಸ್ ,ಮಿನರಲ್ಸ್,ಕ್ಯಾಲ್ಷಿಯಂ  ಅಧಿಕವಿರುತ್ತದೆ.ನಮ್ಮ ಮೂಳೆಗಳಿಗೆ ಒಳ್ಳೆಯದು. ಇದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ,ಮಲಬದ್ಧತೆಯನ್ನು ನಿವಾರಿಸುತ್ತದೆ .

ಖರ್ಜೂರ

-ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುತ್ತದೆ. ನಮ್ಮ ಬಿಪಿಯನ್ನು ಕಡಿಮೆಗೊಳಿಸುತ್ತದೆ .ನಮ್ಮ ಮಸ್ತಿಷ್ಕ ಹಾಗೂ ಮೂಳೆಗಳಿಗೆ ಒಳ್ಳೆಯದು.ಬ್ಲಡ್ ಶುಗರನ್ನು ಸಮತೋಲನದಲ್ಲಿಇಡುತ್ತದೆ.ಡಯಾಬಿಟಿಸ್ ಇರುವವರಿಗೆ ಇದು ಒಳ್ಳೆಯದು .

ಇದನ್ನು ಗಮನಿಸಿ:

ವಾತ ಪ್ರಕೃತಿಯುಳ್ಳವರು ಡ್ರೈ ಫ್ರೂಟ್ಸ್ ಅನ್ನು ಸೇವಿಸಬಾರದು.ಪಿತ್ತ ಹಾಗೂ ಕಫ ಪ್ರಕೃತಿಯ ದೇಹ ಉಳ್ಳವರು ಸೇವಿಸಬಹುದು.

ಡ್ರೈ ಫ್ರೂಟ್ಸ್ ಅನ್ನು ಒಂದು ಮುಷ್ಟಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದಕ್ಕಿಂತ ಅಧಿಕ ಸೇವಿಸಿದರೆ ಹಾನಿಯುಂಟಾಗುತ್ತದೆ . ಅಜೀರ್ಣ,ದೇಹದ ತೂಕ ಹೆಚ್ಚಿರುತ್ತದೆ

ಹೇಗೆ ಸೇವಿಸಬೇಕು?

– ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದು . ಸೇವಿಸಿದ ನಂತರ ಒಂದು ಗಂಟೆಯ ಕಾಲ ನೀರನ್ನು ಕುಡಿಯಬಾರದು  ಇಷ್ಟೆಲ್ಲಾ ಮಾಡಿ ನಿಮ್ಮ ಆರೋಗ್ಯ ನಿಮ್ಮ ಮುಷ್ಟಿಯಲ್ಲಿಡಿ ಅಷ್ಟೆ.

 

ಡಾ.ಹರ್ಷಾ ಕಾಮತ್, ಕಾರ್ಕಳ