ಉಡುಪಿ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಡುಪಿ ವೃತ್ತ ದ ಹೆಚ್ ಟಿ ಗ್ರಾಹಕರ ಸಂವಾದ ಕಾರ್ಯಕ್ರಮ ಶ್ಯಾಮಿಲಿ ಸಭಾಭವನ ಡಿ.19 ರಂದು ಜರಗಿತು.
ಮವಿಸಕಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆಚ್ ಟಿ ಗ್ರಾಹಕರ ಜೊತೆಯಲ್ಲಿ ಸಂವಾದ ನೆಡೆಸಿ ಹಲವು ಸಮಸ್ಯೆಗಳಿಗೆ ಕೊಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಡುಪಿ ಜಿಲ್ಲೆಯ ವಿದ್ಯುತ್ ಸಮಸ್ಯೆಗಳಾದ ಲೋ ವೋಲ್ಟೇಜ್, ವಿದ್ಯುತ್ ನಿಲುಗಡೆ ಕುರಿತುವಿವಿಧ ಭಾಗಗಳಿಂದ ಆಗಮಿಸಿದ್ದ 200 ಕ್ಕೂ ಹೆಚ್ಚು ಗ್ರಾಹಕರು ಸಮಸ್ಯೆ ಸರಿಪಡಿಸುವಂತೆ ಹಾಗೂ ಕೈಗಾರಿಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.
ವೇದಿಕೆಯಲ್ಲಿ ರಮೇಶ ಹೆಚ್ ಜೆ , ನಿರ್ದೇಶಕರು(ತಾಂತ್ರಿಕ), ಜಗದೀಶ್ ಬಿ., ಮುಖ್ಯ ಆರ್ಥಿಕ ಅಧಿಕಾರಿ, ಪುಷ್ಪಾ ಎಸ್, ಮುಖ್ಯ ಇಂಜಿನಿಯರ್(ವಿ), ಮೌರಿಸ್ ಡಿಸೋಜಾ, ನಿಯಂತ್ರಣಾಧಿಕಾರಿ, ಪಿ. ದಿನೇಶ್ ಉಪಾಧ್ಯ, ಉಡುಪಿ ಅಧೀಕ್ಷಕ ಇಂಜಿನಿಯರ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಹೆಚ್ ಟಿ ಗ್ರಾಹಕರ ಪರವಾಗಿ ರಾಜೇಂದ್ರ ಸುವರ್ಣ, ಉದಯಕುಮಾರ್ , ಹರೀಶ್ ಕುಂದರ್ , ಕೃಷ್ಣಪ್ರಸಾದ್ , ವಿಜಯ ಪ್ರಕಾಶ್ , ವಲ್ಲಭ ಭಟ್ , ಪ್ರಶಾಂತ್ ಭಾಗವಹಿಸಿದ್ದರು.
ಕಾರ್ಯ ನಿರ್ವಾಹಕ ಇಂಜಿನಿಯರ್ ಕೆ ಪ್ರಸನ್ನಕುಮಾರ್ ಸ್ವಾಗತಿಸಿದರು. ಸಹಾಯಕ ಇಂಜಿನಿಯರ್ ರಾಜೇಶ್ವರಿ ಪ್ರಾರ್ಥಿಸಿದರು. ವಿನಾಯಕ್ ಕಾಮತ್ ಹಾಗೂ ಭಾಗ್ಯಶ್ರೀ ನಿರೂಪಿಸಿದರು. ರಮೇಶ್ ವಂದಿಸಿದರು.