ಕಲ್ಯಾಣಪುರ: ಡಿ. 17 ರಿಂದ ಶ್ರೀ ವೆಂಕಟರಮಣ ದೇವಳದಲ್ಲಿ ಅಹೋರಾತ್ರಿ ಭಜನಾ ಸಪ್ತಾಹ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಳದಲ್ಲಿ ಶ್ರೀ ವಿಠೋಬಾ ರುಖುಮಾಯಿ ಸನ್ನಿಧಿಯಲ್ಲಿ ಡಿ. 17 ರಿಂದ ಭಜನಾ ಸಪ್ತಾಹ ಆರಂಭಗೊಂಡು ಡಿ. 24 ವರೆಗೆ ನಡೆಯಲಿದೆ. ಊರ ಪರವೂರ ಭಜನಾ ತಂಡಗಳು ಅಹೋರಾತ್ರಿ ಭಜನೆ ನಡೆಸಲಿವೆ.

ಡಿ. 17 ರ ಬೆಳ್ಳಿಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಬಳಿಕ ದೀಪ ಪ್ರಜ್ವಲನೆಯೊಂದಿಗೆ 95 ನೇ ವರ್ಷದ ಭಜನಾ ಮಹೋತ್ಸವ ಆರಂಭ ಗೊಳ್ಳಲಿದೆ. ದೇವರಿಗೆ ಪ್ರತಿ ದಿನ ವಿಶೇಷ ಹೂವಿನ ಅಲಂಕಾರ, ರಾತ್ರಿ ಪೇಟೆ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ 8 ವರೆಗೆ ವಿಶೇಷ ಆಹ್ವಾನಿತ ಅತಿಥಿ ಕಲಾವಿದರಿಂದ ಭಕ್ತಿಸಂಗೀತ ನೆರವೇರಲಿದೆ.

ಡಿ. 17 ರಂದು ಸಿದ್ಧಾರ್ಥ ಬೆಳ್ಮಣ್ಣು, ಬೆಂಗಳೂರು, ಡಿ. 18 ರಂದು ಅಮ್ರಿತಾ ಶೆಣೈ ಮುಂಬಯಿ, ಡಿ. 19 ರಂದು ಶ್ವೇತಾ ಕಾಮತ್ ಮಂಗಳೂರು, ಡಿ. 20 ರಂದು ಶ್ರಾವಣ್ ಪೈ ಹೊಸಂಗಡಿ, ಡಿ. 21 ರಂದು ರಾಘವೇಂದ್ರ ಶಾನ್ ಭಾಗ್ ಬೆಂಗಳೂರು, ಡಿ. 22 ರಂದು ರಾಘವೇಂದ್ರ ಭಟ್ ಬೆಂಗಳೂರು, ಡಿ. 23 ರಂದು ರಾಜೇಶ್ ಪಡಿಯಾರ್ ಮೈಸೂರು, ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಡಿ. 24 ರಂದು ಭಜನಾ ಮಂಗಲೋತ್ಸವ ಸಂಪನ್ನಗೊಳಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.