ಏಳುವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡದಿಂದ “ಕಿರಿಕ್ ಪಾರ್ಟಿ” ಹಿರಿ ಕಿರಿಯರೆನ್ನದೆ ಎಲ್ಲರನ್ನೂ ರಂಜಿಸಿ ಗಲ್ಲಾಪೆಟ್ಟಿಗೆಯನ್ನು ಧೂಳೀಪಟ ಮಾಡಿ ದಾಖಲೆ ಬರೆದಿತ್ತು. ಕಿರಿಕ್ ಪಾರ್ಟಿ ಬಿಡುಗಡೆಯಾಗಿ ಏಳು ವರ್ಷ ಕಳೆದಿದ್ದು, ಅಭಿಮಾನಿಗಳು ಕಿರಿಕ್ ಪಾರ್ಟಿ-2 ರ ಬಿಡುಗಡೆಗಾಗಿ ಕಾಯುತ್ತಲೇ ಇದ್ದರು. ಈ ಬಗ್ಗೆ ಚಿತ್ರದ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದು, ಈ ಬಾರಿ ಪಾರ್ಟಿ ಇನ್ನೂ ಜೋರು ಎಂದಿದ್ದು ಕುತೂಹಲವನ್ನು ಇನ್ನೂ ಕೆರಳಿಸಿದ್ದಾರೆ.
Here’s the fun you ordered ☺️ Get set for all the fun and adventure as #BachelorParty is coming soon.
— Rakshit Shetty (@rakshitshetty) December 13, 2023
ಈ ಸಲ ಪಾರ್ಟಿ ಜೋರು! @iAm1289 @diganthmanchale @LooseMada_Yogi #AchyuthKumar @SiriRavikumar #BalajiManohar @AcharaKirk @ParamvahStudios #BachelorPartyMovie #ParamvahStudios pic.twitter.com/oSgPsSdRqW
ಬಹುತಾರಾಗಣದ ಬೆಂಬಲದೊಂದಿಗೆ, ಈ ಚಿತ್ರವು ಅಭಿಜಿತ್ ಮಹೇಶ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ ಮತ್ತು ಪ್ರಮುಖ ಪಾತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಚಿತ್ರದಲ್ಲಿ ಸಿರಿ ರವಿಕುಮಾರ್ ಮತ್ತು ಥಾಯ್ಲೆಂಡ್ ಮೂಲದ ಯೂಟ್ಯೂಬರ್ ಆಚಾರ ಕಿರ್ಕ್ ಕೂಡ ನಟಿಸಿದ್ದಾರೆ.
ದಿಗಂತ್, ರಿಷಬ್ ಮತ್ತು ಅಚ್ಯುತ್ ಅವರ ಪಾತ್ರಗಳು ಹಾಸ್ಯಮಯವಾಗಿದ್ದರೆ, ರಕ್ಷಿತ್ ಶೆಟ್ಟಿ ಪಾತ್ರವು ಸತ್ವಯುತವಾಗಿದೆ ಎನ್ನಲಾಗಿದೆ.
ನಾನು ಕಿರುಚಿತ್ರ ನಿರ್ಮಿಸುವಾದಾಗಿನಿಂದ ರಕ್ಷಿತ್ ಶೆಟ್ಟಿಯೊಂದಿಗೆ ನನ್ನ ಪ್ರಯಾಣ ಪ್ರಾರಂಭವಾಯಿತು. ಕಿರಿಕ್ ಪಾರ್ಟಿ ನಂತರ ನಾವು ಪೂರ್ಣ ಪ್ರಮಾಣದ ಕಾಮಿಡಿ ಎಂಟರ್ಟೈನರ್ ಮಾಡಿಲ್ಲ. ಬಡ್ಡಿ(ಗೆಳೆತನ) ಕಾಮಿಡಿ ನನ್ನ ನೆಚ್ಚಿನ ಪ್ರಕಾರವಾಗಿದೆ. ರಕ್ಷಿತ್ ನನ್ನ ಸಿನಿಮಾ ನಿರ್ದೇಶಕನ ಆಸೆಗೆ ಬೆಂಬಲ ನೀಡಿದ ಕಾರಣ, ನಾನು ಅವರಿಗೆ ಒಂದು ಕಥೆಯನ್ನು ನೀಡಿದೆ ಮತ್ತು ಅದು ಈಗ ಚಲನಚಿತ್ರವಾಗಿದೆ ಎಂದು ನಿರ್ದೇಶಕ ಅಭಿಜಿತ್ ಹೇಳಿದ್ದಾರೆ.
ಜಿ.ಎಸ್.ಗುಪ್ತಾ ಜೊತೆಗೆ ಈ ಚಿತ್ರವನ್ನು ನಿರ್ಮಿಸುತ್ತಿರುವ ರಕ್ಷಿತ್ ಶೆಟ್ಟಿ ಬ್ಯಾಚುಲರ್ ಪಾರ್ಟಿಯಂತಹ ಚಿತ್ರದ ಮೂಲಕ ಮತ್ತೆ ಬರುತ್ತಿರುವ ಖುಷಿಯಲ್ಲಿದ್ದಾರೆ. ಹಾಸ್ಯ ಸಾಹಸಮಯ ಚಿತ್ರವನ್ನು ಬಹಳ ಶೈಲೀಕೃತ ಮತ್ತು ತಾಜಾ ರೀತಿಯಲ್ಲಿ ಹಾಸ್ಯದ ವಲಯದಲ್ಲಿ ಹೊಂದಿಸಲಾಗಿದೆ. ಮದುವೆ ಮತ್ತು ಪ್ರೇಮ ಜೀವನವನ್ನು ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಅವರು ಚಿತ್ರದ ಮಾಹಿತಿ ನೀಡಿದ್ದಾರೆ.
ಬ್ಯಾಚುಲರ್ ಪಾರ್ಟಿಗೆ ಅರ್ಜುನ್ ರಾಮು ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಬ್ಯಾಚುಲರ್ ಪಾರ್ಟಿಯು ಪವನ್ ಕುಮಾರ್, ಸೌಮ್ಯ ಜಗನ್ಮೂರ್ತಿ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್, ರಘು ರಾಮನಕೊಪ್ಪ, ಶೋಭರಾಜ್ ಮತ್ತು ಗುರುಪ್ರಸಾದ್ ಅವರಂತಹ ಪೋಷಕ ಪಾತ್ರಗಳನ್ನು ಹೊಂದಿದೆ.












