ಅಹಮದಬಾದ್: ಜೈವಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವರ್ಚುಯಲ್ ಆಗಿ ಮಾತನಾಡಿರುವ ಅವರು, 2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್ ಡಾಲರ್ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್ ಡಾಲರ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆರೋಗ್ಯ ಚಿಕಿತ್ಸೆಯ ಮೂಲಾಧಾರವಾಗಿರುವ ಭಾರತದ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಾಜಿ) ಉದ್ಯಮವೂ ಕಳೆದ ಎಂಟು ವರ್ಷಗಳಿಂದ 80 ಬಿಲಿಯನ್ ಡಾಲರ್ಗೂ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್ ಡಾಲರ್ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್ ಡಾಲರ್ ಆಗಲಿದೆ ಎಂದಿದ್ದಾರೆ.
ಕಳೆದ ಎಂಟು ವರ್ಷದಲ್ಲಿ ಭಾರತದ ಜೈವಿಕ- ಆರ್ಥಿಕತೆ 10 ಬಿಲಿಯನ್ ಡಾಲರ್ ನಿಂದ 80 ಬಿಲಿಯನ್ ಡಾಲರ್ ಬೆಳವಣಿಗೆಗೆ ಸಾಕ್ಷ್ಯವಾಗಿದೆ. ಭಾರತವು ಇದೀಗ ಜೈವಿಕ ತಂತ್ರಜ್ಞಾನ ವಲಯದಲ್ಲಿನ ವಿಸ್ತರಣೆಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.ಜಾಗತಿಕ ಹೊಸ ಉದ್ಯಮ ಕ್ರಾಂತಿಯಲ್ಲಿ ಜೈವಿಕ ಉತ್ಪಾದನೆ ಪ್ರಮುಖವಾಗಿದೆ. ಅಗ್ರಿ ಫುಡ್, ಶಕ್ತಿ, ಆರೋಗ್ಯ, ಆರೈಕೆ ಮತ್ತು ಹವಾಮಾನ ಬದಲಾವಣೆ ಪರಿಹಾರದತ್ತ ಇದು ಗುರಿಯನ್ನು ಹೊಂದಿದೆ. ಆದಾಗ್ಯೂ ಜೈವಿಕ ಉತ್ಪಾದನೆ ವಲಯದಲ್ಲಿನ ಮಾನವಶಕ್ತಿ ಕೊರತೆಯು ಸವಾಲಾಗಿ ಉಳಿದಿದೆ. ಈ ಹಿನ್ನೆಲೆ ಅಗತ್ಯ ತರಬೇತಿ ನೀಡಲು ಮತ್ತು ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಪ್ರೇರೇಪಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಬಯೋಟೆಕ್ನಾಲಾಜಿ ವಿಭಾಗದ ಕಾರ್ಯದರ್ಶಿ ಡಾ ರಾಜೇಶ್ ಗೋಖಲೆ, ಮುಂದಿನ ಜಾಗತಿಕ ತಂತ್ರಜ್ಞಾನ ಕ್ರಾಂತಿಯಲ್ಲಿ ಬಯೋಟೆಕ್ನಾಲಾಜಿ ವಲಯವು ಸಾರಥ್ಯವಹಿಸದಲಿದೆ. ಈ ವಲಯದ ಬೆಳವಣಿಗೆಯು ದೇಶದ ಆರ್ಥಿಕತೆ ಮೇಲೆ ಗಮನಾರ್ಹ ಪರಿಣಾಮವನ್ನು ಹೊಂದಿದೆ. ಜೈವಿಕ ಆರ್ಥಿಕತೆಯು 2022 ರಲ್ಲಿ ಭಾರತದ ಜಿಡಿಪಿಯ ಸರಿಸುಮಾರು ಶೇ 4ರಷ್ಟು ಮೌಲ್ಯ ಅಂದರೆ, 137.24 ಬಿಲಿಯನ್ ಡಾಲರ್ ಹೊಂದಿದೆ. ಈ ಅಂಕಿ ಅಂಶವು 2030ರ ಹೊತ್ತಿಗೆ 300 ಬಿಲಿಯನ್ ಡಾಲರ್ ಮೀರಬಹುದು ಎಂದು ಅಂದಾಜಿಸಿದ್ದಾರೆ.
2025 ಬಯೋಟೆಕ್ ಸ್ಟಾರ್ಟ್ಅಪ್ಗಳು 2 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜಾಗತಿಕ ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಭಾರತವೂ ಶೇ 3ರಷ್ಟು ಪಾಲನ್ನು ಹೊಂದಿದ್ದು, ದಕ್ಷಿಣ ಏಷ್ಯಾದ ಮೂರು ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಹಾಗೇ ಜಾಗತಿಕವಾಗಿ 12ನೇ ಸ್ಥಾನದಲ್ಲಿದೆ. (ಐಎಎನ್ಎಸ್)ಸದ್ಯ ದೇಶದಲ್ಲಿ 760 ಬಯೋಟೆಕ್ನಾಲಜಿ ಕಂಪನಿಗಳಿದ್ದು, 4,240 ಸ್ಟಾರ್ಟ್ಅಪ್ಗಳಿವೆ. ಜಾಗತಿಕ ಜೈವಿಕ ತಂತ್ರಜ್ಞಾನದ ಕ್ರಾಂತಿಯಲ್ಲಿ ಭಾರತವು ಮುಂಚೂಣಿಯಲ್ಲಿರುವ ಗುರಿಯನ್ನು ಹೊಂದಿದೆ.