ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಉಡುಪಿ ಭೇಟಿ

ಉಡುಪಿ: ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಅವರು ಆಂಧ್ರ ಪ್ರದೇಶದ ಹೋಟೆಲ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅವರನ್ನು ಗೌರವಿಸಿ ಆಶೀರ್ವದಿಸಿದರು ಪರ್ಯಾಯದ ಆಹ್ವಾನ ಪತ್ರಿಕೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಆದಾಯ ಶಾಖಾ ಅಧಿಕಾರಿ ಆನಂದ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.