ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಭದ್ರಗಿರಿ ಶ್ರೀ ವೀರ ವಿಠ್ಠಲ ದೇವಸ್ಥಾನಕ್ಕೆ ಭೇಟಿ

ಉಡುಪಿ: ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಇಂದು ಬೆಳಿಗ್ಗೆ ದಕ್ಷಿಣ ಪಂಢರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿದರು.

ಶ್ರೀಗಳನ್ನು ಪೂರ್ಣಕುಂಭ ಮಂಗಳ ವಾದ್ಯದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ, ಗುರುಕಾಣಿಕೆ ಸಮರ್ಪಣೆ ಮಾಡಲಾಯಿತು ಶ್ರೀಗಳು ಭಜನಾ ಮಹೋತ್ಸವದ ದೀಪ ಪ್ರಜ್ವಲಿಸಿ ಆಶೀರ್ವದಿಸಿದರು . ನೂತನ ವರ್ಷದ ಶ್ರೀ ವೀರ ವಿಠಲ ದೇವರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎನ್ ಮಂಜುನಾಥ ಪಿ ನಾಯಕ್ , ಆಡಳಿತ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ , ವೇದಮೂರ್ತಿ ಗಣಪತಿ ಭಟ್, ಸದಾನಂದ ಆಚಾರ್ಯ, ಜಯದೇವ ಪುರಾಣಿಕ್ ಕಾರ್ಕಳ, ಕೃಷ್ಣಾನಂದ ಶರ್ಮ ಧರ್ಮ ಬ್ರಹ್ಮಾವರ .ವಿಶ್ವಸ್ತ ಮಂಡಳಿಯ ಸದಸ್ಯ ವಿಠ್ಠಲದಾಸ ಆಚಾರ್ಯ, ಪ್ರಭಾಕರ ಭಟ್, ಗಣೇಶ ಜಿ ಪೈ ಪರ್ಕಳ, ಕೆ ಸಿ ಪ್ರಭು , ಉದಯ ಪಡಿಯಾರ್ ಸಿ.ಕೃಷ್ಣ ಪೈ , ಭಾಸ್ಕರ ಶೆಣೈ, ಸುರೇಶ ಶೆಣೈ ,ಗಿರಿಧರ ರಾವ್ , ಸುಧೀರ ಭಟ್, ದಿನೇಶ ಪಡಿಯಾರ್ ,ಆಶಾ ಆಚಾರ್ಯ, ಕಿಶೋರಿ ಪೈ ,ಭಾಗ್ಯಶ್ರೀ ಭಟ್, ಲತಾ ಆಚಾರ್ಯ, ರಾಧಾ ಗೋಪಾಲಕೃಷ್ಣ , ವೆಂಕಟೇಶ ಶೆಣೈ , ರವಿಚಂದ್ರ ಶೆಣೈ ಉಪಸ್ಥಿತರಿದ್ದರು.

ಭದ್ರಗಿರಿ ಶ್ರೀ ವೀರವಿಠ್ಠಲ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು.

ಪ್ರಭಾಕರ ಭಟ್ ಮತ್ತು ಯೋಗಾನಂದ ಅವರಿಂದ ಅನ್ನ ಸಂತರ್ಪಣಾ ಸೇವೆ ಜರಗಿತು.

ನೂರಾರು ಭಕ್ತರು ಉಪಸ್ಥಿತರಿದ್ದರು.