ಮಂಗಳೂರು: ಹಸಿರು ಜಗತ್ತು ಹಾಗೂ ಪ್ರಕಾಶಮಾನ ಭವಿಷ್ಯ ಎಂಬ ಗುರಿಯೊಂದಿಗೆ ಏರುತ್ತಿರುವ ತಾಪಮಾನ ತಡೆಗಟ್ಟಲು, ಹಸಿರು ಪರಿಸರ ಸಂರಕ್ಷಣೆ ಮಾಡುವ ಕಾಳಜಿಯೊಂದಿಗೆ ಬ್ಯಾಂಕ್ ಆಫ್ ಬರೋಡ ಇವರ ವತಿಯಿಂದ ಹಣ್ಣಿನ ಗಿಡಗಳ ನೆಡುವಿಕೆ ಹಾಗೂ ಸಂರಕ್ಷಣೆ ಕಾರ್ಯಕ್ರಮ ಮಂಗಳೂರು ಸುತ್ತಮುತ್ತ ಕಾಲೇಜ್, ಶಾಲಾ ಪರಿಸರದಲ್ಲಿ ನಡೆಯಿತು.
ಬ್ಯಾಂಕ್ ಆಫ್ ಬರೋಡದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ವಲಯ ಮುಖ್ಯಸ್ಥ ರಮೇಶ್ ಕಾನಡೆ ಹಾಗೂ DGM ಅಶ್ವಿನಿ ಕುಮಾರ್ ಇವರು ಹಣ್ಣಿನ ಗಿಡಗಳನ್ನು ಹಸ್ತಾಂತರ ಮಾಡಿ, ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.
ಜಾಗತಿಕ ತಾಪಮಾನ ತಡೆಗಟ್ಟಲು, ಮುಂದಿನ ಪೀಳಿಗೆಗೆ ಪರಿಸರ ರಕ್ಷಣೆ ಮಾಡಲು ಇಂಥ ಕಾರ್ಯಕ್ರಮ ಸಹಕಾರಿ. ಶಾಲಾ ವಿದ್ಯಾರ್ಥಿಗಳು ಹಣ್ಣಿನ ಗಿಡ ಸಂರಕ್ಷಣೆ ಮಾಡಿ ನಮ್ಮ ಮುಂದಿನ ಮಕ್ಕಳಿಗೆ ಹಣ್ಣು, ಮರ, ನೆರಳು ದೊರಕುವಂತೆ ಪರಿಸರ ರಕ್ಷಣೆ ಮಾಡಲು ಅವರು ಕರೆ ನೀಡಿದರು.
ಪ್ರಥಮ ದರ್ಜೆ ಕಾಲೇಜು, ಕಾವೂರ್, ಹಿಂದುಳಿದ ವರ್ಗ ಹಾಸ್ಟೆಲ್ ನಂತೂರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರೌಢಶಾಲೆ ಪಾವೂರ್ ಹಾಗೂ ಉಚ್ಚಿಲ ಸೋಮೇಶ್ವರ, ಪರಿಜ್ಞಾನ ವಿದ್ಯಾಲಯ ಸೋಮೇಶ್ವರ ಹೀಗೆ ಶಾಲೆ ಕಾಲೇಜುಗಳಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡದ ಅಧಿಕಾರಿಗಳಾದ ರಾಕೇಶ್ ಝಾ, ಏಡ್ರಿಚ್ ಅಜಯ್ ಡಿಸೋಜಾ, ಸಂಜಯ್
,ಆಯಾಯ ಶಾಲಾ ಕಾಲೇಜು ಮುಖ್ಯಸ್ಥರು, ಶಾಲಾ ವಿದ್ಯಾರ್ಥಿಗಳು, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಚಿನ್ ಹೆಗ್ಡೆ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಜೀವನ್ ಕೊಲ್ಯ ಹಾಜರಿದ್ದರು.