ಕೊನೆಗೂ ಯಶ್ ಮುಂದಿನ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಬಹು ಸಮಯದ ಕುತೂಹಲದ ಬಳಿಕ ಟೀಸರ್ ಬಿಡುಗಡೆ ಹೊಂದಿದೆ. “ಟಾಕ್ಸಿಕ್” ಇದು ‘ಎ ಫೇರಿ ಟೇಲ್ ಫಾರ್ ಗ್ರೊವ್ನ್ ಅಪ್’ (ವಯಸ್ಕರಿಗಾಗಿ ಒಂದು ಕಾಲ್ಪನಿಕ ಕಥೆ) ಎಂಬ ಟ್ಯಾಗ್ ಲೈನ್ ನೊಂದಿಗೆ ಟೀಸರ್ ಬಿಡುಗಡೆಯಾಗಿದೆ. ಕೆಜಿಎಫ್ ನಟ ಯಶ್ ಪ್ರಭಾವಶಾಲಿ ಟೈಟಲ್ ಟೀಸರ್ನೊಂದಿಗೆ ಶೀರ್ಷಿಕೆ “ಟಾಕ್ಸಿಕ್” ಅನ್ನು ಘೋಷಿಸಿದ್ದಾರೆ. 2025 ಏಪ್ರಿಲ್ 10 ರಂದು ಚಿತ್ರ ಬಿಡುಗಡೆಯಾಗಲಿದೆ.
ಕೆಲವು ಅರ್ಧ ಸುಟ್ಟ ಇಸ್ಪೀಟ್ ಕಾರ್ಡ್ಗಳು ಕತ್ತಲೆಯಲ್ಲಿ ಬೀಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಯಶ್ ಅವರ ಒಂದು ನೋಟವು ಅನಾವರಣಗೊಳ್ಳುತ್ತಿದ್ದಂತೆ ಹಿನ್ನಲೆಯಲ್ಲಿ ಆಕರ್ಷಕ ಸಂಗೀತ ಕೇಳಿಬರುತ್ತದೆ. ಯಶ್ ಕೌಬಾಯ್ ಲುಕ್ನಲ್ಲಿ ಸಿಗಾರ್ ಸೇದುತ್ತಾ ವಿಶಿಷ್ಟ ಗನ್ ಹಿಡಿದುಕೊಂಡಿದ್ದಾರೆ.
Check out the New Title Announcement of @TheNameIsYash https://t.co/EXsgc3csEf#Yash19 #toxic #titleannouncement #kannadasuperstar pic.twitter.com/7Fusk7Al87
— SIIMA (@siima) December 8, 2023
ಟಾಕ್ಸಿಕ್ ಚಿತ್ರವನ್ನು ಮೂತೊನ್ ಖ್ಯಾತಿಯ ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದೆ. ಪಾತ್ರವರ್ಗ, ನಟರು ಮತ್ತು ತಂಡದ ಸದಸ್ಯರನ್ನು ಇನ್ನೂ ಘೋಷಿಸಲಾಗಿಲ್ಲ.












