ಪ್ರವಾಹ ಪರಿಸ್ಥಿತಿ ಸುಧಾರಿಸಿದ ಬೆನ್ನಲ್ಲೇ ತಮಿಳುನಾಡಿಗೆ ಭೂಕಂಪನದ ಬಿಸಿ : ಕರ್ನಾಟಕದಲ್ಲಿ ನಡುಗಿದ ಭೂಮಿ

ಚೆಂಗಲ್ಪಟ್ಟು (ತಮಿಳುನಾಡು): ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಹಿನ್ನೆಲೆ ತಮಿಳುನಾಡಿನಲ್ಲಿ ಮಿಚೌಂಗ್​ ಚಂಡಮಾರುತ ಅಬ್ಬರಿಸಿತ್ತು. ಹೌದು ಇಂದು ಬೆಳಗ್ಗೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಸುಮಾರು 10 ಕಿ.ಮೀ ಪ್ರದೇಶದಲ್ಲಿ ಇಂದು ಬೆಳಗ್ಗೆ 07: 39ರ ಸುಮಾರಿಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ.ತಮಿಳುನಾಡಿನ ಹಲವೆಡೆ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು.ಕರ್ನಾಟಕ ಮತ್ತು ತಮಿಳುನಾಡಿನ ಕೆಲವೆಡೆ ಭೂಕಂಪನ ಸಂಭವಿಸಿದೆ. ಅದರಲ್ಲೂ, ಚೆನ್ನೈನಂತಹ ಮಹಾನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರ ಚಿಂತೆಗೆ ಕಾರಣವಾಗಿತ್ತು. ಪ್ರವಾಹ ಪರಿಸ್ಥಿತಿ ಸುಧಾರಿಸಿದ ಬೆನ್ನಲ್ಲೇ ತಮಿಳು ಪ್ರದೇಶದಲ್ಲಿ ಭೂಕಂಪನದ ಬಿಸಿ ತಾಗಿದೆ. ಕರ್ನಾಟಕದ ವಿಜಯಪುರದಲ್ಲಿಯೂ ಭೂಕಂಪ ಸಂಭವಿಸಿದೆ

ವಿಜಯಪುರ, ಗುಜರಾತ್​ನಲ್ಲೂ ಕಂಪಿಸಿದ ಭೂಮಿ: ಅಲ್ಲದೇ, ಇಂದು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲೂ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ವಿಜಯಪುರ ಅಷ್ಟೇ ಅಲ್ಲ ಗುಜರಾತ್​ನಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 3.9 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ಕಚ್​​​​ನಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್​ ಸೆಂಟರ್​ ಫಾರ್​ ಸಿಸ್ಮೋಲಜಿ ಹೇಳಿದೆ.
ಇಂದು ಬೆಳಗ್ಗೆ 7.40ರ ಸುಮಾರಿಗೆ ಅಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ ವಿನ್ನಮಂಗಲಂ, ಪೆರಿಯಂಕುಪ್ಪಂ, ಚಂದೋರ್ಕುಪ್ಪಂ, ಕರುಂಬೂರು, ಆಲಂಕುಪ್ಪಂ, ಪಾಲೂರು ಸೇರಿದಂತೆ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ಸ್ಥಳಗಳು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿವೆ.

ಕಳೆದ ತಿಂಗಳಷ್ಟೇ ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿ ಜನರು ಭಯಭೀತರಾದ ವಾತಾವರಣ ನಿರ್ಮಾಣಗೊಂಡಿತ್ತು. ಅಕ್ಟೋಬರ್​ನಲ್ಲಿ ಕೂಡ ಉತ್ತರಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿತ್ತು.ಅಸ್ಸೋಂ ಭೂಕಂಪ: ಇಂದು ತಮಿಳುನಾಡು, ಕರ್ನಾಟಕ, ಗುಜರಾತ್​ನ ಕೆಲ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ದರೆ, ನಿನ್ನೆ ಅಸ್ಸೋಂನಲ್ಲಿ ಭೂಮಿ ನಡುಗಿತ್ತು. ಭೂಕಂಪಶಾಸ್ತ್ರದ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಗುರುವಾರ ಬೆಳಗ್ಗೆ ಅಸ್ಸೋಂನ ಗುವಾಹಟಿಯಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ನಿನ್ನೆ ಬೆಳಗ್ಗೆ 5.42ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿದೆ.ಇತ್ತೀಚೆಗಷ್ಟೇ ತಮಿಳುನಾಡಿನ ಕೆಲವೆಡೆ ಅದರಲ್ಲೂ ಚೆನ್ನೈನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ತಗ್ಗು ಪ್ರದೇಶಗಳ ಮೇಲೆ ಭಾರಿ ಪ್ರಭಾವ ಬೀರಿತ್ತು. ಅನೇಕ ಕಡೆಗಳಲ್ಲಿ ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಕ್ಷಣಾ ಪಡೆಗಳ ತೀವ್ರ ಕಾರ್ಯಾಚರಣೆ ಹಿನ್ನೆಲೆ ಅನೇಕರ ಪ್ರಾಣ ರಕ್ಷಿಸಲು ಸಾಧ್ಯವಾಯಿತು. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದ್ರಿಂದು ಭೂಕಂಪ ಸಂಭವಿಸಿದ ಹಿನ್ನೆಲೆ ವಾತಾವರಣದ ಬಗ್ಗೆ ಜನರು ಕೊಂಚ ಭಯಭೀತರಾಗಿದ್ದಾರೆ.