ಭಾರತಿ ವಿಷ್ಣುವರ್ಧನ್ ಅವರಿಗೆ ಚೊಚ್ಚಲ ಕರ್ನಾಟಕ ನಂದಿ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರಾರಂಭವಾಗಿದ್ದು ಪ್ರಶಸಿ ಪ್ರದಾನ ಸಮಾರಂಭವು ಒರಿಯನ್ ಮಾಲ್‌ನಲ್ಲಿ ಬುಧವಾರದಂದು ನಡೆಯಿತು. ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ ಇದಾಗಿದ್ದು, ಈ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಬೆನ್ನು ತಟ್ಟುವ ಪ್ರಯತ್ನದ ಭಾಗವಾಗಿ ನಂದಿ ಪ್ರಶಸ್ತಿ ನೀಡುವ ಉದ್ದೇಶ ಹೊಂದಿದೆ.

ಕರ್ನಾಟಕ ನಂದಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಲಾಯಿತು. ಭಾರತಿ ಅವರ ಪರವಾಗಿ ಪ್ರಶಸ್ತಿಯನ್ನು ಅನಿರುದ್ದ ಜತ್ಕರ್ ಅವರು ಸ್ವೀಕರಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಚೊಚ್ಚಲ ನಂದಿ ಪ್ರಶಸ್ತಿ ಪಡೆದವರ ಪಟ್ಟಿ

  1. ಅತ್ಯುತ್ತಮ ಬಯೋಪಿಕ್ ಪ್ರಶಸ್ತಿ: ವಿಜಯಾನಂದ
  2. ಐತಿಹಾಸಿಕ ನಟಿ: ಲೀಲಾವತಿ

3.ಜೀವಮಾನ ಸಾಧನೆ ಪ್ರಶಸ್ತಿ: ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್

  1. ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ: ಗಂಧದಗುಡಿ
  2. ಅತ್ಯುತ್ತಮ ಚೊಚ್ಚಲ ನಟ: ವಿಕ್ರಮ್ ರವಿಚಂದ್ರನ್ (ತ್ರಿವಿಕ್ರಮ್)
  3. ಅತ್ಯುತ್ತಮ ಚೊಚ್ಚಲ ನಟಿ: ರೀಷ್ಮಾ ನಾಣಯ್ಯ‌ (ಏಕ್‌ಲವ್‌ ಯಾ)
  4. ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು (ಫ್ಯಾಮಿಲಿ ಪ್ಯಾಕ್‌)
  5. ಅತ್ಯುತ್ತಮ ಹಾಸ್ಯ ನಟಿ: ಹೇಮಾದತ್ (ತೋತಾಪುರಿ)
  6. ಅತ್ಯುತ್ತಮ ಪೋಷಕ ನಟಿ- ವೀಣಾ ಸುಂದರ್ (ತೋತಾಪುರಿ)
  7. ಅತ್ಯುತ್ತಮ ನಟ ಕ್ರಿಟಿಕ್‌- ಸಂಚಾರಿ ವಿಜಯ್ (ತಲೆದಂಡ)
  8. ಅತ್ಯುತ್ತಮ ಸಂಭಾಷಣೆಕಾರ ಮಾಸ್ತಿ (ಗುರು ಶಿಷ್ಯರು)
  9. ಅತ್ಯುತ್ತಮ ಚಿತ್ರ- 777 ಚಾರ್ಲಿ
  10. ಅತ್ಯುತ್ತಮ ನಿರ್ದೇಶಕ- ರಿಷಬ್ ಶೆಟ್ಟಿ (ಕಾಂತಾರ)
  11. ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
  12. ಅತ್ಯುತ್ತಮ ನಟಿ- ಸಪ್ತಮಿ ಗೌಡ (ಕಾಂತಾರ)
  13. ಅತ್ಯುತ್ತಮ ಖಳನಟ- ಡಾಲಿ ಧನಂಜಯ್ (ಹೆಡ್‌ ಬುಷ್)‌
  14. ಅತ್ಯುತ್ತಮ ನಟ ಪೋಷಕ ಪಾತ್ರ-ಲೂಸ್ ಮಾದ ಯೋಗಿ (ಹೆಡ್‌ ಬುಷ್‌)
  15. ಅತ್ಯುತ್ತಮ ನಟಿ ವಿಮರ್ಶಕ-‌ ಹರಿಪ್ರಿಯಾ (ತಾಯಿ ಕಸ್ತೂರ ಬಾ) – ಅನುಪ್ರಭಾಕರ್ (ಸಾರಾ ವಜ್ರ)
  16. ಅತ್ಯುತ್ತಮ ಮಾಧ್ಯಮ ಫೋಟೋಗ್ರಾಫರ್- ಕೆ.ಎನ್.ನಾಗೇಶ್ ಕುಮಾರ್
  17. ಆತ್ಯುತ್ತಮ ಪಿಆರ್ – ನಾಗೇಂದ್ರ