ಬಿಬಿಸಿ : ಭಾರತ ಮೂಲದ ಡಾ.ಸಮೀರ್ ಷಾ ಹೊಸ ಬಾಸ್​

ಲಂಡನ್: ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸಮೀರ್​ ಅವರನ್ನು ಬಿಬಿಸಿಯ ಹೊಸ ಬಾಸ್​ ಆಗಿ ಆಯ್ಕೆ ಮಾಡಲು ಹೌಸ್ ಆಫ್ ಕಾಮನ್ಸ್​ನ ಸಂಸದರು ಒಪ್ಪಿಗೆ ಸೂಚಿಸಿದ್ದಾರೆ. ಜೊತೆಗೆ ಅವರ ನೇಮಕಾತಿ ಪೂರ್ವ ಪರಿಶೀಲನೆ ನಡೆಯಲಿದ್ದು, ಮೀಡಿಯಾ ಕಲ್ಚರ್, ಮೀಡಿಯಾ ಮತ್ತು ಸ್ಪೋರ್ಟ್ಸ್ ಸೆಲೆಕ್ಟ್ ಕಮಿಟಿಯ ಕ್ರಾಸ್ ಸಂಸದರು ಸಮೀರ್​ ಅವರ ಜೊತೆಗೆ ಪ್ರಶ್ನೋತ್ತರ ಸಂವಾದ ನಡೆಸಲಿದ್ದಾರೆ.
40 ವರ್ಷಗಳಿಂದ ಇಂಗ್ಲೆಂಡ್​ನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಭಾರತ ಮೂಲದ ಡಾ. ಸಮೀರ್​ ಷಾ ಅವರನ್ನು ಖ್ಯಾತ ವಾಹಿನಿ ಮಾಧ್ಯಮವಾದ ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೋರೇಷನ್​ (ಬಿಬಿಸಿ) ಮೀಡಿಯಾದ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲ ದುಡಿದಿರುವ ಡಾ. ಸಮೀರ್​ ಶಾ ಅವರು ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾಗಿದ್ದಾರೆ. ಅವರ ಅನುಭವದ ಸಂಪತ್ತು ಮಾಧ್ಯಮದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಇಂಗ್ಲೆಂಡ್​ ಕಲ್ಚರಲ್​ ಕಾರ್ಯದರ್ಶಿ ಲೂಸಿ ಫ್ರೇಜರ್ ಬುಧವಾರ ಹೇಳಿದರು. ಜೊತೆಗೆ ಸಮೀರ್​ ಅವರ ನೇಮಕಾತಿಯನ್ನು ದೃಢಪಡಿಸಿದರು.ಎಲಿಜಬೆತ್​ ರಾಣಿಯಿಂದ ಗೌರವ: ಮಾಧ್ಯಮ ಕ್ಷೇತ್ರದಲ್ಲಿ ಸಮೀರ್​ ಅವರ ಸೇವೆಗಳಿಗಾಗಿ 2019 ರಲ್ಲಿ ರಾಣಿ ಎಲಿಜಬೆತ್ II ಅವರಿಂದ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜೀನಾಮೆ ನೀಡಿದ್ದ ರಿಚರ್ಡ್ ಶಾರ್ಪ್ ಅವರ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ.

ಸಮೀರ್​ ಭಾರತ ಮೂಲ : ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜನಿಸಿದ ಸಮೀರ್​ ಷಾ 1960 ರಲ್ಲಿ ಇಂಗ್ಲೆಂಡ್‌ಗೆ ವಲಸೆ ಬಂದಿದ್ದರು. ಇಲ್ಲಿಯೇ ನೆಲೆಸಿರುವ ಅವರು, ಈ ಹಿಂದೆ ಬಿಬಿಸಿಯಲ್ಲಿ ಬ್ಯುಸಿನೆಸ್​ ಅಂಡ್​ ಪೊಲಿಟಿಕಲ್​ ಈವೆಂಟ್​ ಮುಖ್ಯಸ್ಥರಾಗಿದ್ದರು. ಖಾಸಗಿ ದೂರದರ್ಶನ ಮತ್ತು ರೇಡಿಯೊ ನಿರ್ಮಾಣ ಕಂಪನಿಯಾದ ಜುನಿಪರ್‌ನ ಸಿಇಒ ಕೂಡ ಆಗಿದ್ದರು. ಇದಾದ ಬಳಿಕ ಷಾ ಅವರು 2007 ಮತ್ತು 2010 ರ ನಡುವೆ ಬಿಬಿಸಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಬಿಬಿಸಿ ಯಶಸ್ಸು ಸಾಧಿಸುವ ಮಹತ್ವಾಕಾಂಕ್ಷೆಯನ್ನು ಸಮೀರ್​ ಅವರು ಹೊಂದಿದ್ದಾರೆ. ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ಬಿಬಿಸಿಗೆ ಅಗತ್ಯ ಇರುವ ಸಾರಥ್ಯವನ್ನು ಅವರು ನೀಡಲಿದ್ದಾರೆ ಎಂದು ನನಗೆ ಸಂದೇಹವಿಲ್ಲ ಎಂದು ಅವರು ಹೇಳಿದರು.