ಇಸ್ರೇಲ್​ : ಹೌತಿ ಬಂಡುಕೋರರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಇಸ್ರೇಲ್​

ಟೆಲ್ ಅವಿವ್(ಇಸ್ರೇಲ್): ಜತೆಗೆ ಬ್ಯಾಲಿಸ್ಟಿಕ್​ ಕ್ಷಿಪಣಿಗಳ ದಾಳಿಯಾಗುತ್ತಿದ್ದಂತೆಯೆ ಇಸ್ರೇಲ್‌ನ ದಕ್ಷಿಣದ ನಗರವಾದ ಐಲಾಟ್‌ನಲ್ಲಿ ಸೈರನ್‌ಗಳಾಗಿವೆ. ತಕ್ಷಣವೇ ಪ್ರತಿರೋಧ ತೋರಿದ ಐರನ್​ ಡೋಮ್​ ಕ್ಷಿಪಣಿಗಳನ್ನು ನಾಶಪಡಿಸುವಲ್ಲಿ ಇಸ್ರೇಲ್​ ರಕ್ಷಣಾ ತಂಡ ಯಶಸ್ವಿಯಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಬ್ಯಾಲಿಸ್ಟಿಕ್​ ಕ್ಷಿಪಣಿಯು ಇಸ್ರೇಲ್​ನ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ.

ಯೆಮೆನ್‌ನಲ್ಲಿರುವ ಇರಾನ್​ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದ ಮೇಲೆ ಬ್ಯಾಲಿಸ್ಟಿಕ್​ ಕ್ಷಿಪಣಿಗಳನ್ನು ಹಾರಿಸಿದ್ದು, ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಅವುಗಳನ್ನು ತಡೆದು ಹೊಡೆದುರುಳಿಸಿದೆ ಎಂದು ಇಸ್ರೇಲ್​ ಅಧಿಕೃತ ಮಾಧ್ಯಮ ಸಂಸ್ಥೆ ಬುಧವಾರ ವರದಿ ಮಾಡಿದೆ.ಇರಾನ್​ ಬೆಂಬಲಿತ ಹೌತಿಗಳು ಇಸ್ರೇಲ್​ನ ಐಲಾಟ್‌ ಕೆಂಪು ಸಮುದ್ರ ಮೇಲೆ ಬ್ಯಾಲಿಸ್ಟಿಕ್​ ಕ್ಷಿಪಣಿಗಳನ್ನು ಹಾರಿಸಿದ್ದು, ಅವುಗಳನ್ನು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಸಮರ್ಥವಾಗಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.

ಹಡಗನ್ನೇ ಅಪಹರಿಸಿದ ಬಂಡುಕೋರರು: ನವೆಂಬರ್​ 19ಕ್ಕೆಯೆಮೆನ್‌ನ ಹೌತಿ ಬಂಡುಕೋರರು ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ‘ಗ್ಯಾಲಕ್ಸಿ ಲೀಡರ್’ ಹೆಸರಿನ ಸರಕು ಸಾಗಣೆ ಹಡಗನ್ನು ಅಪಹರಿಸಿದ್ದರು. ಇಸ್ರೇಲ್‌ಗೆ ಸೇರಿದ ಈ ಹಡಗನ್ನು ಕೆಂಪು ಸಮುದ್ರದಲ್ಲಿ ಹೈಜಾಕ್ ಮಾಡಿ ಯೆಮನ್‌ನ ಕರಾವಳಿ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಹೆಲಿಕಾಪ್ಟರ್‌ನಲ್ಲಿ ಬಂದ ಬಂದೂಕು ಧಾರಿಗಳು ಹಡಗಿನ ಡೆಕ್‌ನಲ್ಲಿ ಇಳಿದಿದ್ದಾರೆ. ಬಳಿಕ ಘೋಷಣೆಗಳನ್ನು ಕೂಗುತ್ತಾ ಗಾಳಿಯಲ್ಲಿ ಗುಂಡು ಹಾರಿಸಿ, ತಕ್ಷಣ ಅಲ್ಲಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಹಡಗಿನ ಸಂಪೂರ್ಣ ನಿಯಂತ್ರಣವನ್ನು ತಮ್ಮ ವಶಕ್ಕೆ ಪಡೆದು ಹೈಜಾಕ್ ಮಾಡಿದ್ದಾರೆ. ಈ ಅಪಹರಣದ ವಿಡೀಯೋವನ್ನು ಕೂಡ ಬಿಡುಗಡೆ ಮಾಡಿದ್ದರು. ಹಮಾಸ್ – ಇಸ್ರೇಲಿ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಹೌತಿ ಬಂಡುಕೋರರು ಘೋಷಿಸಿದ್ದರು.

ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಇಸ್ರೇಲ್​ ಮತ್ತು ಹಮಾಸ್ ಯುದ್ಧದ ಆರಂಭದಿಂದ ಹೌತಿಗಳು ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಎಲಾಟ್‌ ಮೇಲೆ ಹಾರಿಸಿದ್ದರು. ಆದರೆ, ಅವುಗಳನ್ನು ತಡೆ ಹಿಡಿಯಲಾಗಿದೆ. ಇತ್ತೀಚಿನ ವಾರಗಳಲ್ಲಿ ಹೌತಿಗಳು ಉಡಾಯಿಸಿದ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲಿ ಫೈಟರ್ ಜೆಟ್‌ಗಳು ಹೊಡೆದುರುಳಿಸಿವೆ.ಮತ್ತು ದಾಳಿಕೋರರ ಗುರಿಯು ಇಸ್ರೇಲಿ ಭೂಪ್ರದೇಶವನ್ನು ದಾಟಲಿಲ್ಲ. ಇದರಿಂದ ಯಾವ ಪ್ರಾಣಕ್ಕೂ ಅಪಾಯವಾಗಿಲ್ಲ. ಪ್ರೋಟೋಕಾಲ್ ಪ್ರಕಾರ, ಯಾವುದೇ ದಾಳಿ ಬಗ್ಗೆ ಎಚ್ಚರಿಕೆ ನೀಡುವ ಸೈರನ್​ಗಳನ್ನು ಸಕ್ರಿಯಗೊಳಿಸಲಾಗಿತ್ತು. ಈ ನಡುವೆ, ಇರಾನ್ ಬೆಂಬಲಿತ ಬಂಡುಕೋರ ಗುಂಪು ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಇದು ಐಲಾಟ್ ಪ್ರದೇಶದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಹಲವಾರು ಕ್ಷಿಪಣಿಗಳನ್ನು ಹಾರಿಸಲಾಗಿತ್ತು ಎಂದು ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.