ಎಲ್ಲಿಂದ ಬರ್ತಿರೋ ನೀವೆಲ್ಲಾ, ಜಾಬ್ ಮಾರ್ಲೆ ಮುಂತಾದ ಕಿರುಚಿತ್ರಗಳಿಂದ ಗಮನಸೆಳೆದಿರುವ ಪ್ರತೀಕ್ ಶೆಟ್ಟಿ ತಂಡದಿಂದ ಮತ್ತೊಂದು ಎಂಟರ್ ಟೈನರ್ ಕಿರುಚಿತ್ರ ‘ವಾಟರ್ ಮೆಲನ್’ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಯುವಕರ ಗಮನ ಸೆಳೆಯುತ್ತಿದೆ.
ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ಸ್ ಅಡಿಯಲ್ಲಿ ಮೂಡಿಬಂದಿರುವ ಕಿರು ಚಿತ್ರದಲ್ಲಿ ಪ್ರತೀಕ್, ಶ್ರೀ ಭವ್ಯ, ಸುಪ್ರೀತ್ ಕಾಟಿ ಮುಂತಾದವರು ನಟಿಸಿದ್ದಾರೆ. ರಾಜ್ ಕನಕ ಕಥೆ ಬರೆದು ನಿರ್ದೇಶಿಸಿದ್ದಾರೆ.
ಸಿನಿಮಾ ಸೈಕಲ್ ಸಂಸ್ಥೆ ಸಹಯೋಗದಲ್ಲಿ ಭಾಗ್ಯಮ್ಮ ಉಜ್ಜಿನಪ್ಪ ನಿರ್ಮಾಣ ಮಾಡಿದ್ದಾರೆ.
ಕೂಲ್ ಮಗಾ ಸ್ಟುಡಿಯೋಸ್ ಎಡಿಟಿಂಗ್ ಜವಾಬ್ದಾರಿ ನಿಭಾಯಿಸಿದೆ.