ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಾಡಿಕೆಯಂತೆ ವರ್ಷಂಪ್ರತಿ ಜರಗುವ ಕಾರ್ತಿಕ ದೀಪೋತ್ಸವ ಬುಧವಾರದಂದು ಸಂಪನ್ನವಾಯಿತು.

ಶ್ರೀ ದೇವರಿಗೆ ವಿಶೇಷ ಅಲಂಕಾರ, ಪಲ್ಲಕಿ ಉತ್ಸವ, ಮಹಾಪೂಜೆ, ಸಮಾರಾಧನೆ, ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ಕೆರೆದೀಪ, ಬಳಿಕ ಪೇಟೆ ಉತ್ಸವ, ಕಟ್ಟೆಪೂಜೆ ನಡೆಯಿತು.

ಧಾರ್ಮಿಕ ಪೂಜಾ ವಿಧಾನಗಳನ್ನು ರ್ಚಕರಾದ ವಿನಾಯಕ ಭಟ್ ಹಾಗೂ ದಯಾಘನ್ ಭಟ್ ನೆರವೇರಿಸಿದರು.

ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು ಧನ್ಯರಾದರು. ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ, ಅರ್ಚಕರಾದ ದೀಪಕ್ ಭಟ್, ಗಿರೀಶ್ ಭಟ್, ಜಿ ಎಸ್ ಬಿ ಯುವಕ ಮಂಡಲದ ಅಧ್ಯಕ್ಷ ನಿತೇಶ್ ಶೆಣೈ, ವಿಶಾಲ್ ಶೆಣೈ, ನರಹರಿ ಪೈ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತುಮಹಿಳಾ ಮಂಡಳಿ ಸದಸ್ಯರು ಹಾಗೂ ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.