ಇಂಗ್ಲೆಂಡ್ ಅತ್ಯಂತ ಪ್ರಬಲ ತಂಡವಾಗಿತ್ತು. ಆದರೆ ಈ ಬಾರಿ ಎಂತಹ ಕಳಪೆ ಪ್ರದರ್ಶನ ನೀಡಿತೆಂದರೆ, ಕೊನೆಯ ಸ್ಥಾನಕ್ಕೆ ಹೋಗಿತ್ತು. ಕಡೆಯಲ್ಲಿ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು 7ನೇ ಸ್ಥಾನಿಯಾಗಿ ಬಚಾವಾಯಿತು. ಬಾಂಗ್ಲಾದೇಶದ್ದೂ ಇಲ್ಲಿ ಕಳಪೆ ಪ್ರದರ್ಶನ. ಅಚ್ಚರಿಯೆಂದರೆ ಅಫ್ಘಾನಿಸ್ತಾನ ಆಡಿದ ರೀತಿ, ಅದ್ಭುತವಾಗಿ ಆಡಿ ಚಾಂಪಿಯನ್ಸ್ ಲೀಗ್ಗೆ ನೇರ ಅರ್ಹತೆ ಪಡೆಯಿತು. ಶ್ರೀಲಂಕಾ ಮಾತ್ರ ಮತ್ತೆ ಅರ್ಹತಾ ಸುತ್ತಿನಲ್ಲಿ ಆಡುವ ಪರಿಸ್ಥಿತಿಗೆ ಇಳಿದಿದೆ.ಏಕದಿನ ವಿಶ್ವಕಪ್ನ ಲೀಗ್ ಹಂತದಲ್ಲಿ ಯಾವ ತಂಡಗಳು ಅಗ್ರ 8ರಲ್ಲಿ ಸ್ಥಾನ ಪಡೆದಿವೆಯೋ, ಅವು ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿವೆ. ಅಗ್ರಸ್ಥಾನ ಪಡೆದ ಭಾರತ, ದ್ವಿತೀಯ ಸ್ಥಾನಿ ದ.ಆಫ್ರಿಕಾ, ತೃತೀಯ ಸ್ಥಾನಿ ಆಸ್ಟ್ರೇಲಿಯ, ನಾಲ್ಕನೇ ಸ್ಥಾನಿ ನ್ಯೂಜಿಲೆಂಡ್, 5ನೇ ಸ್ಥಾನಿಯಾಗಿ ಪಾಕಿಸ್ತಾನ (ಆತಿಥೇಯ ತಂಡವಾಗಿ ಅದಕ್ಕೆ ಈಗಾಗಲೇ ಅರ್ಹತೆಯಿತ್ತು), 6ನೇ ಸ್ಥಾನಿಯಾಗಿ ಅಫ್ಘಾನಿಸ್ತಾನ, 7ನೇ ಸ್ಥಾನಿಯಾಗಿ ಇಂಗ್ಲೆಂಡ್, 8ನೇ ಸ್ಥಾನಿಯಾಗಿ ಬಾಂಗ್ಲಾದೇಶ ಅರ್ಹತೆ ಪಡೆದಿವೆ