ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಎಪಿಎಂಸಿ( ಕೃಷಿ ಉತ್ಪನ್ನ ಮಾರುಕಟ್ಟೆ) ಜಿಲ್ಲೆಯ ಕೃಷಿಕರು ಬೆಳೆದಂತಹ ಬೆಳೆಗಳನ್ನು ಮಾರಾಟ ಮಾಡುವಂತಹ ಕೇಂದ್ರ. ಈ ಕೇಂದ್ರ ಉತ್ತಮ ರೀತಿಯಾಗಿ ನಡೆಯುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿತ್ತು ಆದರೆ ಕಳೆದ ಕಳೆದ ಐದಾರು ವರ್ಷಗಳಿಂದ ಎಪಿಎಂಸಿಯಲ್ಲಿ ಕೃಷಿಕರಿಗೆ ಮತ್ತು ವರ್ತಕರಿಗೆ ಮಾರಾಟ ಮಾಡಲು ಅನುಕೂಲಕರ ವ್ಯವಸ್ಥೆ ಕಂಡುಬರುತ್ತಿಲ್ಲ ಅಧಿಕಾರಿಗಳ ದಬ್ಬಾಳಿಕೆ, ಭ್ರಷ್ಟಾಚಾರ ಮತ್ತು ದುರ್ನಡತೆ ಎದ್ದು ಕಾಣುತ್ತಿತ್ತು.
ಕ್ಯಾನ್ಸರ್ ಪೀಡಿತ ವರ್ತಕನಿಂದ 250 ರೂಪಾಯಿಯ ಲೈಸೆನ್ಸ್ ಗೆ 40,000ರೂ ಪಾವತಿ ಮಾಡಿಸಿರುವ ಘಟನೆ ಹಾಗೂ ಮರಣ ಹೊಂದಿ 3 ವರ್ಷ 1 ತಿಂಗಳಾದರೂ ಮೃತಪಟ್ಟವರು ಪ್ರತಿ ತಿಂಗಳೂ ತನ್ನ ಕೋಣೆಗೆ ಬಾಡಿಗೆ ಪಾವತಿಸಿರುವ ಸಂಗತಿ ಎಡಿಸಿಯ ಕುಂದು ಕೊರತೆಯಲ್ಲಿ ಘಟನೆ ಬೆಳಕಿಗೆ ಬಂದಾಗ ಅಕ್ರಮದ ವಿರುದ್ದ ಎಪಿಎಂಸಿ ರಕ್ಷಣಾ ಸಮಿತಿಯನ್ನು ರಚಿಸಿ, ಊರಿನ ಜನತೆ, ವರ್ತಕರು ಹಾಗೂ ಕೃಷಿಕರು ಸೇರಿಕೊಂಡು ಹೋರಾಟವನ್ನು ಪ್ರಾರಂಭ ಮಾಡಿದ್ದಾರೆ.
ಹೋರಾಟದ ಆರಂಭದಿಂದಲೂ ಅನೇಕ ಮನವಿಗಳನ್ನು ಎಸಿ, ಡಿಸಿ, ಎಂಪಿ, ಎಂಎಲ್ಎ, ಸಚಿವರಿಗೆ ನೀಡಲಾಯಿತು. ಅನೇಕ ಪ್ರತಿಭಟನೆಗಳನ್ನು ಮಾಡಲಾಯಿತು. ಕೊನೆಗೆ ಅಹೋರಾತ್ರಿ ಧರಣಿ ಮೂಲಕ ಹೊರಾಟವನ್ನು ಮಾಡಲು ಮುಂದಾದಾಗ ಶಾಸಕ ಯಶ್ ಪಾಲ್ ಸುವರ್ಣ ಆಗಮಿಸಿ ಭ್ರಷ್ಟ ಅಧಿಕಾರಿಗಳಿಗೆ ನನ್ನ ಕ್ಷೇತ್ರದಲ್ಲಿ ಜಾಗ ಇಲ್ಲ, ಮತ್ತು ಅವರನ್ನು ನೌಕರಿಯಿಂದ ಅಮಾನತು ಮಾಡಲಾಗಿದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಸಂಘಟಿತ ಹೋರಾಟಕ್ಕೆ ಹಾಗೂ ಕೃಷಿಕರು ವರ್ತಕರು ಊರಿನ ನಾಗರಿಕರ ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಇಂದು ಹೋರಾಟಕ್ಕೆ ಜಯ ಸಿಕ್ಕಿದೆ. ಆದ್ದರಿಂದ ಇನ್ನಾದರೂ ಈ ಭ್ರಷ್ಟಾಚಾರ ನಿಲ್ಲುವಂತಾಗಲಿ. ಭ್ರಷ್ಟಾಚಾರದ ವಿರುದ್ದ ಕೇವಲ ಭಾಷಣ ಬಿಗಿಯದೆ ಹೋರಾಟ ಮಾಡಿದಾಗ ಮಾತ್ರ ಜಯ ಸಿಗುವುದು. ಬುಧವಾರ ಬೆಳಗ್ಗೆ ನಡೆದ ಅಹೋರಾತ್ರಿ ಧರಣಿಯ ಮಧ್ಯದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರು ಆಗಮಿಸಿ ಭ್ರಷ್ಟ ಅಧಿಕಾರಿಯನ್ನು ಅಮಾನತು ಮಾಡಿದ ವಿಚಾರವನ್ನು ತಿಳಿಸಿದಾಗ ಎಲ್ಲರಿಗೂ ಸಂತಸವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಅಧಿಕಾರಿಗಳು ಬಂದರೆ ಖಂಡಿತವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಮಿತಿಯ ಅಧ್ಯಕ್ಷ ವಿಜಯ್ ಕೊಡವೂರು ತಿಳಿಸಿದ್ದಾರೆ.












