ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಭಕ್ತಿ ಭಾವದ ಮನ್ಮಹಾರಥೋತ್ಸವ ಸಂಪನ್ನ

ಬೈಂದೂರು: ಅವಿಭಜಿತ ದ.ಕ ಜಿಲ್ಲೆಯ ಎರಡನೆ ಪ್ರಸಿದ್ದ ಕೊಡಿಹಬ್ಬವು ಮಂಗಳವಾರದಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ಮನ್ಮಹಾರಥೋತ್ಸವದೊಂದಿಗೆ ನೆರವೇರಿತು. ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದ ತಂತ್ರಿಗಳ ನೇತೃತವದಲ್ಲಿ ಪಂಚಾಮೃತಾಭಿಷೇಕ, ವಿಶೇಷ ಭೂತ ಬಲಿ ಹಾಗೂ ಇತರ ಧಾರ್ಮಿಕ ಕಾರ್ಯಗಳು ಸಂಪ್ರದಾಯದಂತೆ ನಡೆದವು.

ಸಾವಿರಾರು ಭಕ್ತರು ಶೃದ್ದಾ ಭಕ್ತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡರು. ಶ್ರೀ ದೇವಿಗೆ ಹರಕೆ ರೂಪದಲ್ಲಿ ಸಲ್ಲಿಸಲಾದ ಸೀರೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.

ರಥಬೀದಿಯಲ್ಲಿ ಚಂಡೆ, ನಾಸಿಕ್ ಬ್ಯಾಂಡ್, ಕೀಲು ಕುದುರೆ ತಟ್ಟಿಯಾರ ಜನರನ್ನು ರಂಜಿಸಿತು.

ಕಾನೂನು ಸುವ್ಯವಸ್ಥೆ ಕಾಪಾಡಲು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿತ್ತು.