
ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನ.23ನೇ ಗುರುವಾರ ಧ್ವಜಾರೋಹಣದಿಂದ ಮೊದಲ್ಗೊಂಡು ನ.30 ಗುರುವಾರ ಧ್ವಜಾರೋಹಣದವರೆಗೆ ರಥೋತ್ಸವದ ಅಂಗವಾಗಿ ವಿವಿಧ ಉತ್ಸವಗಳು ಜರುಗಲಿರುವುದು.
ನ.23 ಗುರುವಾರ ಧ್ವಜಾರೋಹಣಹಾಗೂ ನ.28 ಮಂಗಳವಾರ ಶ್ರೀ ಮನ್ಮಹಾರಥೋತ್ಸವ ಹಾಗೂ ನ.29 ಬುಧವಾರ ಸಂಜೆ ಗಂಟೆ 6.00ರಿಂದ 7.00ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ನ.28 ಮಂಗಳವಾರದಿಂದ ನ.30 ಗುರುವಾರದವರೆಗೆ ದೇಗುಲದಲ್ಲಿ ಅನ್ನಸಂತರ್ಪಣೆ ಜರುಗಲಿರುವುದು. ಭಕ್ತಾದಿಗಳೆಲ್ಲರೂ ಆಗಮಿಸಿ, ಉತ್ಸವಗಳಲ್ಲಿ ಭಾಗವಹಿಸಿ, ಸಿರಿಮುಡಿ ಗಂಧ – ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ಶ್ರೀ ಭೀಮಪ್ಪ. ಹೆಚ್ ಬಿಲ್ಲಾರ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಪತಹಶೀಲ್ದಾರರು ಬೈಂದೂರು ಶ್ರೀಮತಿ ಶೋಭಾಲಕ್ಷ್ಮೀ ಹೆಚ್ .ಎಸ್ ಪ್ರಭಾರ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರರು ಬೈಂದೂರು ತಂತ್ರಿಗಳು, ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆ ತಿಳಿಸಿದೆ.













