ಬೈಂದೂರು: ಚಿನ್ನಾಭರಣ ಮಳಿಗೆಯ ನೌಕರನಿಂದ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು

ಬೈಂದೂರು: ತಾಲೂಕಿನ ಉಪ್ಪುಂದ ಅಂಬಾಗಿಲಿನಲ್ಲಿ ನಿತ್ಯಾನಂದ ಶೇಟ್ ಅವರ ಚಿನ್ನಾಭರಣ ಸಂಸ್ಥೆಯಲ್ಲಿ 2019-21ರ ಅವಧಿಯಲ್ಲಿ ಸಂಸ್ಥೆಯ ನೌಕರ, ಸ್ಥಳೀಯ ನಿವಾಸಿ ಗಿರೀಶ್ ಶೇಟ್ ಹಾಗೂ ಸಹೋದರರಾದ ವೆಂಕಟೇಶ್ ಶೇಟ್ ಮತ್ತು ಹರೀಶ್ ಶೇಟ್ ರೂ.10 ಕೋಟಿಗೂ ಅಧಿಕ ವಂಚನೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಠಾಣೆಯ ಅಪರಾಧ ಸಂಖ್ಯೆ 0004/2022 ರಂತೆ ಪ್ರಕರಣ ದಾಖಲಾಗಿದೆ.

ಸದ್ರಿ ಪ್ರಕರಣದಲ್ಲಿ ಆರೋಪಿಯು ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದು, ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಆರೋಪಿ ಗಿರೀಶ್ ಶೇಟ್ ಗ್ರಾಹಕರಿಂದ ಸಂಸ್ಥೆಗೆ 69,86,000 ಬರಬೇಕಾಗಿದ್ದ ಬಾಕಿ ಹಣದಲ್ಲಿ ಒಟ್ಟು ರೂ. 34,53,072 ಹಣವನ್ನು ಮತ್ತೆ ವಂಚಿಸಿರುವುದಾಗಿ ದೂರು ದಾಖಲಾಗಿದ್ದು, ಬೈಂದೂರು ಠಾಣೆಯ ಅಪರಾಧ ಸಂಖ್ಯೆ 0210/2023 ರಂತೆ ಪ್ರಕರಣ ದಾಖಲಾಗಿದೆ.

ಆರೋಪಿಯು ಚಿನ್ನಾಭರಣ ಹಾಗೂ ಗೂಗಲ್ ಪೇ, ಫೋನ್ ಪೆ, ನಗದು ಮೂಲಕ ಹಣ ಪಡೆದುಕೊಂಡು ದುರುಪಯೋಗ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.