ನೀಲಾವರ: ಗೋವು ಮತ್ತು ವೃಷಭಗಳು ತಂದೆ ತಾಯಿಗೆ ಸಮಾನ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ನೀಲಾವರ ಕಾಮಧೇನು ಗೋಶಾಲೆಯಲ್ಲಿ ಉಡುಪಿ ಭಾರತೀಶ ಜ್ಯುವೆಲ್ಲರ್ಸ್ ಮಾಲಕ ಶಶಿಧರ ಭಟ್ ನೇತೃತ್ವದಲ್ಲಿ ಬಂಧುಗಳೊಂದಿಗೆ ನಡೆದ ಗೋಗ್ರಾಸ ಕಾರ್ಯಕ್ರಮ ಸಂದರ್ಭ ಆಶೀರ್ವಚನ ನೀಡಿ ಮಾತನಾಡಿ, ತಮ್ಮ ಜನ್ಮ ದಿನ ಮತ್ತು ಇನ್ನಿತರ ಸಂಭ್ರಮದ ದಿನಗಳನ್ನು ಗೋ ಸೇವೆ ಮಾಡುವುದರ ಮೂಲಕ ಆಚರಿಸಿಕೊಂಡು ಕೃತಾರ್ಥರಾಗಬೇಕು. ಶಶಿಧರ ಭಟ್ ಕಾರ್ಯ ಇತರರಿಗೆ ಮಾದರಿ ಎಂದರು.
ಸ್ಥಳದಲ್ಲಿಯೇ 3 ಕ್ವಿಂಟಾಲ್ ನಷ್ಟು ಕುಚ್ಚಿಗೆ ಅಕ್ಕಿ ಗಂಜಿ ಮಾಡಿ, ಅದರೊಂದಿಗೆ 4 ಕ್ವಿಂಟಾಲ್ ಕಾಯಿ ಹಿಂಡಿ, 4 ಕ್ವಿಂಟಾಲ್ ಎಳ್ಳು ಹಿಂಡಿ, 10 ಕ್ವಿಂಟಾಲ್ ಗೋಪಿ ಹಿಂಡಿ, 120 ಕೆ.ಜಿ ಬೆಲ್ಲ ಸೇರಿದಂತೆ ಇನ್ನಿತರ ಆಹಾರವನ್ನು ಮಿಶ್ರಣ ಮಾಡಿ ಗೋಶಾಲೆಯ ಎಲ್ಲ ಗೋವುಗಳಿಗೆ ಉಣ ಬಡಿಸುವ ಮೂಲಕ ಗೋಸೇವೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಪಾದರ ಪಾದಪೂಜೆ ಮಾಡಲಾಯಿತು.
ಹರೀಶ್ ಆಚಾರ್ಯ ರಮೇಶ್ ಮೂಡಬೆಟ್ಟು, ಸವಿತಾ ಶಶಿಧರ್ ಭಟ್, ಮಂಜುನಾಥ ರಾವ್, ಜನಾರ್ಧನ ಭಟ್, ಗೋವಿಂದ ಭಟ್, ರಾಜಗೋಪಾಲ್ ಭಟ್, ನಾಗರಾಜ್ ಬಾಯರಿ, ವರದ ಭಟ್ ಮಣಿಪಾಲ, ಅನಂತ್ರಾಮ್ ರಾವ್, ನಿರಂಜನ್ ಭಟ್, ಶೈಲೇಶ್ ಭಟ್, ರಜನೀಶ್ ಭಟ್, ಯುವ ಬ್ರಾಹ್ಮಣ ಪರಿಷತ್ ಸದಸ್ಯರು, ವಿಪ್ರ ಭಾಂದವರು ಉಪಸ್ಥಿತರಿದ್ದರು.