ನವದೆಹಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶುಕ್ರವಾರ ಹದಿಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತೊಂದು ಹಿನ್ನಡೆ ಎದುರಿಸಿದೆ. ಅಧಿಕಾರಿಗಳು ತಾಂತ್ರಿಕ ಅಡಚಣೆಯನ್ನು ಪರಿಹರಿಸಿ ಕೊರೆಯುವಿಕೆಯನ್ನು ಪುನರಾರಂಭಿಸಿದ ಸ್ವಲ್ಪ ಸಮಯದ ನಂತರ, ಡ್ರಿಲ್ಲಿಂಗ್ ಯಂತ್ರವು ಸಂಜೆ ಲೋಹದ ವಸ್ತುವಿಗೆ ಅಪ್ಪಳಿಸಿದ್ದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಎರಡು ದಿನಗಳಲ್ಲಿ ಅಂತಹ ಎರಡನೇ ಹಿನ್ನಡೆಯಲ್ಲಿ, 41 ಕಾರ್ಮಿಕರು ಸಿಕ್ಕಿಬಿದ್ದಿರುವ ಉತ್ತರಾಖಂಡದ ಸುರಂಗದಲ್ಲಿ ಶುಕ್ರವಾರ ಸಂಜೆ ಕೊರೆಯುವ ಯಂತ್ರವು ಲೋಹದ ವಸ್ತುವನ್ನು ಎದುರಿಸಿದ ನಂತರ ಕೊರೆಯುವುದನ್ನು ನಿಲ್ಲಿಸಬೇಕಾಯಿತು.
#WATCH | Uttarkashi (Uttarakhand) tunnel rescue | Vertical drilling machine at the Silkyara tunnel as the operation to rescue 41 workers trapped here continues. pic.twitter.com/NeKM5jznOD
— ANI (@ANI) November 25, 2023
ಕಳೆದ ಹದಿಮೂರು ದಿನಗಳಿಂದ ಕಾರ್ಮಿಕರು ಸುರಂಗದೊಳಗೆ ಬಂಧಿಯಾಗಿದ್ದು, ಲಂಬವಾಗಿ ಡ್ರಿಲ್ಲಿಂಗ್ ಕೊರೆಯುವ ಕಾರ್ಯವೂ ಪ್ರಾರಂಭವಾಗಿದೆ. ಉತ್ತರಾಖಂಡದ ಸರಕಾರ, ತಂತ್ರಜ್ಞರು, ರಕ್ಷಣಾ ವಿಶೇಷಜ್ಞರು ಶತಾಯಗತಾಯ ಪ್ರಯತ್ನ ಪಡುತ್ತಿದ್ದರೂ ಸುರಂಗ ಕೊರೆಯುವ ಕಾರ್ಯಕ್ಕೆ ಒಂದಲ್ಲಾ ಒಂದು ಅಡಚಣೆ ಎದುರಾಗುತ್ತಲೇ ಇದೆ.