ಹೆಬ್ರಿ: ಸ.ಪ್ರಾ. ಶಾಲೆಯಲ್ಲಿ ಚಾಣಕ್ಯ ಸಂಸ್ಥೆ ವತಿಯಿಂದ ಕನ್ನಡ ಗೀತಾ ಗಾನಯಾನ ಕಾರ್ಯಕ್ರಮ

ಹೆಬ್ರಿ: ಕನಾ೯ಟಕ ರಾಜ್ಯೋತ್ಸವ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ನಿರಂತರವಾಗಿರಬೇಕು. ಈ ನಿಟ್ಟಿನಲ್ಲಿ ಹೆಬ್ರಿಯ ಚಾಣಕ್ಯ ಸಂಸ್ಥೆ ನವೆಂಬರ್ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ಕನ್ನಡ ಕಂಪನ್ನು ಪಸರಿಸುತ್ತಿರುವುದು ಶ್ಲಾಘನೀಯ. ಗಾನಯಾನ ಕಾಯ೯ಕ್ರಮವನ್ನು ವಷ೯ ಪೂತಿ೯ ಆಚರಿಸಿ ಕನ್ನಡ ಉಳಿಸಿ ಎಂದು ಉದ್ಯಮಿ ಸತೀಶ್ ಪೈ ಅಭಿಪ್ರಾಯಪಟ್ಟರು.

ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ನೇತೃತ್ವದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುತ್ತಿರುವ ಕನ್ನಡ ಗೀತೆಗಳ ಗಾಯನ ಗಾನಯಾನ ಸರಣಿ ಕಾಯ೯ಕ್ರಮದ ಅಂಗವಾಗಿ ನ.23ರಂದು ಸೀತಾನದಿ ಸೌಖ್ಯಯೋಗ ಟ್ರಸ್ಟ್ ಹೆಬ್ರಿ ಹಾಗೂ ಶಾಲಾ ಎಸ್ ಡಿ.ಎಮ್.ಸಿ ಸಮಿತಿ ಹಾಗೂ ಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಸಹಯೋಗದೊಂದಿಗೆ ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಗಾನಯಾನ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಂದು ಮಕ್ಕಳಲ್ಲೂ ಸುಪ್ತ ಪ್ರತಿಭೆಗಳು ಇರುತ್ತವೆ. ಅದನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಿದಾಗ ಪ್ರತಿಭೆಗಳ ಅನಾವರವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಕಾಳಜಿ ಮಾದರಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಇವರು ವಹಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಸತೀಶ್ ಪೈ ಅವರ ಕೊಡುಗೆ ಅಪಾರ. ಅದರ ಜತೆಗೆ ಮಕ್ಕಳಲ್ಲಿ ಕನ್ನಡ ಕಂಪನ್ನು ಉಣ ಬಡಿಸುವ ಈ ಕಾಯ೯ಕ್ರಮ ಶ್ಲಾಘನೀಯ ಎಂದರು.

ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ ಗಾನಯಾನ ಗೀತಗಾಯನ ಕುರಿತು ಸ್ವರಚಿತ ಗೀತೆಯನ್ನು ಹಾಡುವುದರ ಮೂಲಕ ಗಾನಯಾನಕ್ಕೆ ಚಾಲನೆ ನೀಡಿದರು.

ಶಾಲಾ ಶಿಕ್ಷಕಿ ಸುಕೇತ ಸ್ವರಚಿತ ಗೀತೆಯನ್ನು ಹಾಡಿದರು. ಶಾಲಾ ವಿದ್ಯಾರ್ಥಿಗಳಾದ ಪ್ರಣತಿ ತಂಡ ಕನ್ನಡ ಗೀತೆಯನ್ನು ಹಾಡಿದರು. ಚಾಣಕ್ಯ ತಂಡದ ಗಾಯಕರಾದ ನಿತ್ಯಾನಂದ ಭಟ್, ಸುಬ್ರಹ್ಮಣ್ಯ ಕಂಗಿನಾಯ, ಉಮಾಶ್ರೀ, ಮೀನಾಕ್ಷಿ, ನಾಗರಾಜ್ ಬಚ್ಚಪ್ಪು ಅವರು ಕನ್ನಡ ಗೀತಾ ಗಾಯನ ನಡೆಸಿಕೊಟ್ಟರು.

ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಸ್ವಾಗತಿಸಿ, ಶಾಲಾ ಹಿಂದಿ ಭಾಷಾ ಶಿಕ್ಷಕ ಶರತ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ, ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ನ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ವಂದಿಸಿದರು.