ಮೆಸ್ಕಾಂ ವ್ಯಾಪ್ತಿಯ ಉಡುಪಿ ಪಟ್ಟಣದ ಪ್ರದೇಶಗಳಲ್ಲಿ ನ.26 ರ ವರೆಗೆ ಆನ್‌ಲೈನ್ ಸೇವೆ ತಾತ್ಕಾಲಿಕ ಸ್ಥಗಿತ

ಉಡುಪಿ: ಮಾಹಿತಿ ತಂತ್ರಜ್ಞಾನ ಸೇವೆಗೆ ಸಂಬಂಧಿಸಿದಂತೆ, ತಂತ್ರಾಂಶ ಹಾಗೂ ಹಾರ್ಡ್ವೇರ್ ಉನ್ನತೀಕರಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ಉಡುಪಿ ಪಟ್ಟಣದ ಪ್ರದೇಶಗಳಲ್ಲಿ ನವೆಂಬರ್ 26 ರ ವರೆಗೆ ಆನ್‌ಲೈನ್ ಆಧಾರಿತ ಸೇವೆ ಸ್ಥಗಿತಗೊಳಿಸಲಾಗುತ್ತಿರುವುದರಿಂದ ನಗದು ಪಾವತಿ ಕೌಂಟರ್‌ಗಳಲ್ಲಿ ಆನ್‌ಲೈನ್ ಸೇವೆಗಳಾದ ಹೊಸ ವಿದ್ಯುತ್ ಸಂಪರ್ಕ, ಹೆಸರು –ಲೋಡ್ ಬದಲಾವಣೆ, ನಗದು ಪಾವತಿ, ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಇತ್ಯಾದಿ ಸೇವೆಗಳು ಇರುವುದಿಲ್ಲ.

ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.