ಮಾಬುಕಳ: ಫಾರ್ಚ್ಯೂನ್ ಅಕಾಡೆಮಿ ಆಂಡ್ ಚಾರಿಟೇಬಲ್ ಟ್ರಸ್ಟ್(ರಿ) ಆಡಳಿತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆಯು ನ.20 ರಂದು ಜರಗಿತು.
ಮುಖ್ಯ ಅತಿಥಿಯಾಗಿ ಆಲ್ವಾಸ್ ಆಯುರ್ವಾಡ ಕಾಲೇಜಿನ ರಸಶಾಸ್ತ್ರ ವಿಭಾಗ್ದ ಪ್ರಾಧ್ಯಾಪಕ ಡಾ. ಬಿ ವಿಜಯಚಂದ್ರ ಶೆಟ್ಟಿ ಭಾಗವಹಿಸಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ನಾಯಕತ್ವವನ್ನು ಮೈಗೂಡಿಸಿಕೊಂಡು ತನ್ನ ಏಳಿಗೆಯೊಂದಿಗೆ ಇತರರ ಏಳಿಗೆಗೆ ಪಾತ್ರರಾಗಿ ಸಂಸ್ಥೆ ಹಾಗೂ ಸಮಾಜದ ಸರ್ವತೋಮುಖ ಶ್ರೇಯಸ್ಸಿಗೆ ಕಾರಣರಾಗಬೇಕು ಎಂದರು.
ಕಾಲೇಜಿನ ಅಧ್ಯಕ್ಷ ತಾರನಾಥ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ಪ್ರೊ.ಸ್ಮಿತಾಮೋಲ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿ ಕಾರ್ಯದರ್ಶಿ ಕೀರ್ತನ ಪ್ರಭು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ವೀಣಾ ಡಿ’ಸೋಜಾ ಸ್ವಾಗತಿಸಿ, ಪೂರ್ಣಿಮಾ ಪ್ರಾಸ್ತಾವಿಸಿದರು, ವಿದ್ಯಾರ್ಥಿ ನಾಯಕ ಕೋಟೇಶ್ ಎಂ.ಎಚ್ ವಂದಿಸಿದರು.