ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಇದರ ಅಂಗಸಂಸ್ಥೆಯಾದ ಸುಲಭ್ ಸೂತ್ರ್ – ಅಬಾಕಸ್ ಮತ್ತು ವೇದಗಣಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಬಾ ಇಂಟರ್ ನ್ಯಾಶನಲ್ ಕಲ್ಚರಲ್ ಅಕಾಡೆಮಿ ಚೆನೈ ಇವರ ಆಶ್ರಯದಲ್ಲಿ ನಡೆಸಿದ ಅಬಾಕಸ್ ಇಂಟರ್ ನ್ಯಾಶನಲ್ ಲೆವಲಿನಲ್ಲಿಅತ್ಯುತ್ತಮ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಪುರಸ್ಕಾರ ಸಮಾರಂಭವು ನ.18 ರಂದು ಕ್ರಿಸ್ಟಲ್ ಬಿಜ್ಹ್ ಹಬ್ನಲ್ಲಿ, ಚಂದ್ರಕಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮಾತನಾಡಿ ಅಬಾಕಸ್ ಮತ್ತು ವೇದಗಣಿತವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಹಕಾರಿ ಹಾಗೂ ಹೆತ್ತವರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇತ್ತೀಚೀನ ದಿನಗಳಲ್ಲಿ ಅನ್ಲೈನ್ನಲ್ಲಿ ವ್ಯವಹರಿಸುವಾಗ ಮೋಸಹೋಗುವವರ ಸಂಖ್ಯೆ ಹೆಚ್ಚಿದೆ, ಹೆತ್ತವರು ಇದರ ಬಗ್ಗೆ ತುಂಬಾ ಜಾಗರೂಕರಿರಬೇಕೆಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಸುನೀತಾ ಅಬಾಕಸ್ ಹಾಗೂ ವೇದಗಣಿತದ ಉಪಯೋಗಗಳನ್ನು ಹೆತ್ತವರಿಗೆ ತಿಳಿಯಪಡಿಸಿದರು. ನಂತರ ಮಕ್ಕಳಿಂದ ಅಬಾಕಸ್ ಪ್ರಾತ್ಯಕ್ಷತೆ ನಡೆಯಿತು.
ಇದೇ ಸಮಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಮ್ಯಾಥ್ಕ್ವಿಜ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಅಬಾಕಸ್ ಜ್ಯೂನಿಯರ್ ಹಾಗೂ ಲೆವಲ್ ಒಂದನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಶಸ್ತಿಗಳಿದ ವಿದ್ಯಾರ್ಥಿಗಳು
ಸೀನಿಯರ್ ವಿಭಾಗ :
ಶ್ರೀಧ, ಆಕಾಶ್ ತಂತ್ರಿ, ಸಾನ್ವಿ ಚರಣ್, ಮಾನ್ವಿ ಪಿ. ನಾಯಕ್, ಸುಗತ್, ಶ್ರೀಕೃಷ್ಣ ಚರಣ್ ನಿಕ್ಕಮ್
ಜ್ಯೂನಿಯರ್ ವಿಭಾಗ :
ಪ್ರಥಮ ಭಟ್, ಢಾರಿಣಿ ಪ್ರಶಾಂತ್ ಭಟ್, ಮಿಥುನ್ ರಾಥೋಡ್
ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಹೊಂದಿರುವ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನ ಬಗ್ಗೆ ಉಪನ್ಯಾಸಕಿ ದಿವ್ಯಾ ಕೋಟ್ಯಾನ್ ಸಂಕ್ಷಿಪ್ತ ಪರಿಚಯ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಮಾರ್ಟಿನ ನಿರೂಪಿಸಿದರು. ದಿವ್ಯಾ ವಂದಿಸಿದರು.