ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ

ಹೊಸದಿಲ್ಲಿ: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷವು ತನ್ನ ಹೊಸ ರಾಜ್ಯಾಧ್ಯಕ್ಷರ ನೇಮಕ ಮಾಡಿದೆ. ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಕ್ಷದ ವರಿಷ್ಠ ನಾಯಕ ಯಡಯೂರಪ್ಪ ನವರ ಪುತ್ರ ಬಿ. ವೈ ವಿಜಯೇಂದ್ರ ಅವರ ನೇಮಕವಾಗಿದೆ.

ಶಿಕಾರಿಪುರ ಶಾಸಕರಾಗಿರುವ ಯುವ ನಾಯಕ ಬಿ.ವೈ ವಿಜಯೇಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ನಡೆದು ತಿಂಗಳುಗಳೇ ಕಳೆದರೂ ಹೊಸ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ನೇಮಕವಾಗದೆ ಪಕ್ಷವು ಅಪಹಾಸ್ಯಕ್ಕೆ ಗುರಿಯಾಗಿತ್ತು.

ತಮಿಳುನಾಡಿನಲ್ಲಿ ಈ ಬಾರಿ ಅಣ್ಣಾಮಲೈ ಹವಾ ಜೋರಾಗಿ ಬೀಸುತ್ತಿದ್ದು, ಕರ್ನಾಟಕದಲ್ಲಿಯೂ ಯುವ ನಾಯಕತ್ವದ ಅವಶ್ಯಕತೆ ಎದ್ದು ತೋರುತ್ತಿತ್ತು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಾಂದ್ಲಾಜೆ, ವಿ.ಸೋಮಣ್ಣ, ಸಿ.ಟಿ ರವಿ, ಆರ್.ಅಶೋಕ್ ಮುಂತಾದವರ ಹೆಸರು ಕೇಳಿಬಂದಿದ್ದರೂ ಪಕ್ಷದ ವರಿಷ್ಠ ನಾಯಕನ ಸುಪುತ್ರ ನಿಗೆ ಪಕ್ಷ ಗೆಲ್ಲಿಸುವ ಹೊಣೆ ನೀಡಿ ಎಲ್ಲ ಊಹಾಪೋಹ ಗಳಿಗೆ ತೆರೆ ಎಳೆದಿದೆ.