ನ-18 ರಿಂದ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

ನೀಲಾವರ: ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರದಲ್ಲಿ ವಿವಿಧ ಉತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ನ-18 ರಂದು ಮೊದಲೇ ಪಂಚಮಿ ತೀರ್ಥಸ್ನಾನ
ಡಿ-2 ರಂದು ಎರಡನೇ ಪಂಚಮಿ ತೀರ್ಥಸ್ನಾನ, ರಂಗಪೂಜೆ ಮತ್ತು ದೀಪೋತ್ಸವ
ಡಿ-18 ರಂದು ಷಷ್ಠಿ ರಥೋತ್ಸವ
ಡಿ-23 ರಂದು ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆ ಆಟ

ವಿ.ಸೂ: ಡಿ-2 ರ ಎರಡನೇ ಪಂಚಮಿ ತೀರ್ಥಸ್ನಾನದಂದು ರಾತ್ರಿ ಜರಗುವ ವಿಶೇಷ ದೀಪೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಎಣ್ಣೆ ಬತ್ತಿಯನ್ನು ಸಲ್ಲಿಸಬಹುದು ಅಥವಾ ಕಾಣಿಕೆಯನ್ನು ಸೇವಾ ಕೌಂಟರಿನಲ್ಲಿ ಪಾವತಿಸಬಹುದು ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.