ಬ್ರಹ್ಮಾವರ: ಎಸ್.ಎಂ.ಎಸ್ ಪ.ಪೂ ಕಾಲೇಜಿನಲ್ಲಿ ಎಸ್.ಎಂ.ಎಸ್ ಫೆಸ್ಟ್ 2023 ಇದರ ಸಮಾರೋಪ ಸಮಾರಂಭ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒ.ಎಸ್.ಸಿ ವಿದ್ಯಾ ಸಂಸ್ಥೆಯ ಸಂಚಾಲಕ ರೆ.ಫಾ. ಎಂ.ಸಿ ಮಥಾಯಿ ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹಿತವಚನ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಎಂ ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಕಾಶ್ಚಂದ್ರ ಶೆಟ್ಟಿ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಲಹೆ ಸೂಚನೆ ನೀಡಿದರು.
ಬ್ರಹ್ಮಾವರ ಪ್ರಭಾರ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಉಮಾ ಮಾತನಾಡಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿ ಎಂದರು.
ಒ.ಎಸ್.ಸಿ ವಿದ್ಯಾ ಸಂಸ್ಥೆಯ ಖಜಾಂಜಿ ಥೋಮಸ್ ಸುವಾರಿನ್ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಶುಂಪಾಲ ಲಯನ್ ಐವನ್ ಡೊನಾತ್ ಸ್ವಾಗತಿಸಿದರು. ಸುಚೇತಾ ಶೆಟ್ಟಿ ನಿರೂಪಿಸಿದರು. ಶರೋನ್ ಡಿ’ ಸೋಜಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಅಕ್ಷತಾ ವಂದಿಸಿದರು. ಸಿಬ್ಬಂದಿ ಕಾರ್ತಿಕ್ ರಾಜ್ ಸಂಗೀತದೊಂದಿಗೆ ರಂಜಿಸಿದರು.
ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.
ಸ್ಪರ್ಧೆಯಲ್ಲಿ ಬ್ರಹ್ಮಾವರ ವಲಯದ 325 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ಯಾರ್ಥಿಗಳ ವಿವರ ಇಂತಿದೆ:
- ಇಂಗ್ಲಿಷ್ ಭಾಷಣ
ಪ್ರಥಮ- ಧೃತಿ ಎನ್.ಎಂ. – SMS ಆಂಗ್ಲ ಮಾಧ್ಯಮ ಶಾಲೆ CBSE, ಬ್ರಹ್ಮಾವರ
ದ್ವಿತೀಯ- ಗೌರಿ ಎಸ್.ನಾಯಕ್- ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
2.ಕನ್ನಡ ಮಾತುಗಾರಿಕೆ
ಪ್ರಥಮ- ನಿಶ್ಮಿತಾ ಶೆಟ್ಟಿ- ಸರ್ಕಾರಿ ಪ್ರೌಢಶಾಲೆ, ಅವರ್ಸೆ
ದ್ವಿತೀಯ- ನವ್ಯಶ್ರೀ- ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ
- ವರ್ಕಿಂಗ್ ಮಾಡಲ್
ಪ್ರಥಮ- ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ- ವಿವೇಕ ಬಾಲಕರ ಪ್ರೌಢಶಾಲೆ, ಕೋಟಾ - ನಾನ್ ವರ್ಕಿಂಗ್ ಮಾಡಲ್
ಪ್ರಥಮ- ಸರ್ಕಾರ ಪ್ರೌಢಶಾಲೆ. ಕಾವಡಿ
ದ್ವಿತೀಯ- SMS ಕನ್ನಡ ಮಾಧ್ಯಮ ಪ್ರೌಢಶಾಲೆ, ಬ್ರಹ್ಮಾವರ - ರಸಪ್ರಶ್ನೆ
ಪ್ರಥಮ- ಚಿನ್ಮಯ್ ಎಂ & ನವನೀತ್ ನಾಯಕ್, ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ- ಯಶವಂತ್ ಮತ್ತು ಶ್ರೀಶಾ- ಸರ್ಕಾರಿ ಪ್ರೌಢಶಾಲೆ, ಕಾವಡಿ - ಟ್ರೆಷರ್ ಹಂಟ್
ಪ್ರಥಮ- SMS ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ-ರಾಜ್ಯ ಪಠ್ಯಕ್ರಮ, ಬ್ರಹ್ಮಾವರ
ದ್ವಿತೀಯ- ಸೇಂಟ್ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಸಾಸ್ತಾನ - ಡ್ರಾಯಿಂಗ್
ಪ್ರಥಮ- ಮಾನ್ಯ, ಡಾ. ಟಿಎಂಎ ಪೈ ಆಂಗ್ಲ ಮಾಧ್ಯಮ ಶಾಲೆ, ಕಲ್ಲಿಯನಪುರ
ದ್ವಿತೀಯ- ವೈಭವ್ ಎನ್ ಆಚಾರ್ಯ, ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಸಂತೆಕಟ್ಟೆ - ರಂಗೋಲಿ
ಪ್ರಥಮ- ಸಾನ್ವಿ ರವೀಂದ್ರ ಮತ್ತು ಖ್ಯಾತಿ ಲಕ್ಷ್ಮಿ- ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ- ಖುಷಿ ವೈಭವ್ ಮತ್ತು ಅರ್ಪಿತಾ- ಸೇಂಟ್ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಸಾಸ್ತಾನ - ಕೊಲಾಜ್
ಪ್ರಥಮ- ಆಯೇಷಾ ಕುಬ್ರಾ ಮತ್ತು ಆಯೇಶಾ ಆಸ್ನಾ- ಎಸ್‌ಎಂಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಬ್ರಹ್ಮಾವರ
ದ್ವಿತೀಯ- ಸಾನ್ವಿ ಮತ್ತು ಹರ್ಷಿತಾ- ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆ-ಸಿಬಿಎಸ್‌ಇ, ಬ್ರಹ್ಮಾವರ - ಭಾವಗೀತೆ
ಪ್ರಥಮ- ಚಿಂತನ – ಡಾ. ಟಿಎಂಎ ಪೈ ಆಂಗ್ಲ ಮಾಧ್ಯಮ ಶಾಲೆ. ಕಲ್ಯಾಣಪುರ
ದ್ವಿತೀಯ- ಪೂರ್ವಿ ಛತ್ರ- ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ - ಜನಪದ ಗೀತೆ
ಪ್ರಥಮ- ತನ್ಮಯ್ ಭಟ್- ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ- ಪೂಜಾ, ಸರ್ಕಾರಿ ಪ್ರೌಢಶಾಲೆ, ಕಾವಡಿ - ಚಲನಚಿತ್ರ ಹಾಡು
ಪ್ರಥಮ – ಶಿಪ್ರಾ ಭಟ್ರ, ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ- ಶರಣ್ಯ, ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ - ಕ್ಲೇ ಮಾಡೆಲ್
ಪ್ರಥಮ- ಧನರಾಜ್ ಮತ್ತು ಅಶ್ಮಿತ್- SMS ಆಂಗ್ಲ ಮಾಧ್ಯಮ ಶಾಲೆ-CBSE, ಬ್ರಹ್ಮಾವರ
ದ್ವಿತೀಯ- ನಿಕಿತಾ ಮತ್ತು ವೀರಣ್ಣ ಗೌಡ- ಮಹಾತ್ಮ ಗಾಂಧಿ ಪ್ರೌಢಶಾಲೆ, ಸಾಯಿಬ್ರಕಟ್ಟೆ - ಟಗ್ ಆಫ್ ವಾರ್
ಪ್ರಥಮ- ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಸಂತೆಕಟ್ಟೆ
ದ್ವಿತೀಯ- SMS ಆಂಗ್ಲ ಮಾಧ್ಯಮ ಶಾಲೆ- ರಾಜ್ಯ ಪಠ್ಯಕ್ರಮ, ಬ್ರಹ್ಮಾವರ