ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ) ಕೇರಳ ಇದರ ಗಡಿನಾಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಡಮಾಡುವ ಪತ್ರಿಕೋದ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿಗೆ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ.ಬಿ.ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾಪು ತಾಲೂಕಿನ ಪರಿಸರದಲ್ಲಿ ಸಮಾಜ ಸೇವಕರಾಗಿ ಜನಸಂಪರ್ಕ ಜನಸೇವಾ ವೇದಿಕೆ ಮೂಲಕ ಮದ್ಯವರ್ಜನ ಶಿಬಿರ, ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ, ಆರೋಗ್ಯ ಶಿಬಿರ, 1000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು 20 ವರುಷಗಳಿಂದ ಸತತವಾಗಿ ವಿದ್ಯಾರ್ಥಿವೇತನ ನೀಡುವ
ಕಾರ್ಯಕ್ರಮ ಏರ್ಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಸರಕಾರದಿಂದ ಸಿಗುವ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸುಮಾರು ೫೦೦ಕ್ಕೂ ಮಿಕ್ಕಿ ಫಲಾನುಭಾವಿಗಳಿಗೆ ದೊರಕಿಸಿ ಕೊಟ್ಟಿರುತ್ತಾರೆ.
ವಿವಿಧ ಸಂಘ ಸಂಸ್ಥೆಗಳಿಂದ ಬಡವರಿಗೆ ಮನೆ ಕಟ್ಟಿಕೊಟ್ಟು ಆಶ್ರಯದಾತರಾಗಿದ್ದಾರೆ. ರಂಗಕಲಾವಿದರಿಗೆ ಸನ್ಮಾನ, ಸತ್ಯನಾರಾಯಣ ಪೂಜೆ ಅಲ್ಲದೆ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಕೋವಿಡ್ ಸಮಯದಲ್ಲಿ ಸಮಾಜ ಸೇವಾ ವೇದಿಕೆ ಮೂಲಕ
ಸುಮಾರು 6000 ಕ್ಕೂ ಮಿಕ್ಕಿ ಆಹಾರ ಕಿಟ್ ನೀಡಿ ಬಡ ಜನರಿಗೆ ಸಹಾಯ ಮಾಡಿದ್ದಾರೆ. ಹಲವಾರು ಸಮಾಜ ಸೇವೆ ಮಾಡಿರುವ ಕಾಪು ಬಂಟರ ಸಂಘದ ನಿದೇಶಕರು ಕೊಟ್ಟಾರಿ ಅಶ್ವಥ ಕಟ್ಟೆ ಸಮಿತಿಯ ಪ್ರಧಾನ ವ್ಯವಸ್ಥಾಪಕರಾಗಿ ಹಲವಾರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಏಷ್ಯಾ ಫೆಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ ಜನಸೇವಾ ಸದ್ಭಾವನ ಪುರಸ್ಕಾರ ಅವಾರ್ಡ್ ಗೋವಾ, ಕೈರಾಲಿ ಪ್ರಕಾಶ್ ಕಾಸರಗೋಡು ವತಿಯಿಂದ ಸಮಾಜ ರತ್ನ ಅವಾರ್ಡ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಜಿಲ್ಲಾ ಸಾಧಕ ಅವಾರ್ಡ್
ಇಷ್ಟು ಲಭಿಸಿದೆ ಹಾಗೂ ನೂರಾರು ಕಡೆ ಗುರುತಿಸಿ ಸನ್ಮಾನಿಸಲಾಗಿದೆ. ಭಾನುವಾರ ಕೇರಳ ರಾಜ್ಯದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಭಾಗವಹಿಸಲಿದ್ದು ಇವರನ್ನು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ರಾಜ್ಯೋತ್ಸವ ನೀಡಲಿದ್ದೇವೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ
ಅಕಾಡೆಮಿ(ರಿ) ಕೇರಳ ಇದರ ಸಂಸ್ಥಾಪಕರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.