ಬಿಡುಗಡೆಗೂ ಮುನ್ನ ಟಿಕೆಟ್ಗಳು ಶರವೇಗದಲ್ಲಿ ಮಾರಾಟವಾಗುತ್ತಿವೆ. ಈಗಾಗಲೇ ಮುಂಗಡ ಟಿಕೆಟ್ ಮಾರಾಟದಲ್ಲಿ ಸುಮಾರು 4.2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ವರ್ಷದ ಅತಿ ಹೆಚ್ಚು ಮುಂಗಡ ಟಿಕೆಟ್ ಮಾರಾಟವಾದ ಮೂರನೇ ಚಿತ್ರ ಇದಾಗಿದೆ.ಮನೀಶ್ ಶರ್ಮಾ ನಿರ್ದೇಶನದ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ‘ಟೈಗರ್ 3’ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಮನೀಶ್ ಶರ್ಮಾ ನಿರ್ದೇಶನದ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಚಿತ್ರವನ್ನು IMAX, 4DX, DBOX, ICE, PXL ಮತ್ತು 4D ಎಮೋಷನ್ ಸೇರಿದಂತೆ ವಿವಿಧ ಪ್ರೀಮಿಯಂ ಸ್ವರೂಪಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಅದರಲ್ಲಿ ಹಿಂದಿ 2D ಶೋಗಳು 7,231 ಪ್ರದರ್ಶನಗಳಲ್ಲಿ 1,38,804 ಟಿಕೆಟ್ಗಳನ್ನು ಮಾರಾಟ ಮಾಡಿದೆ. ಹಿಂದಿ IMAX 2D ಶೋಗಳು 109 ಸ್ಕ್ರೀನ್ಗಳಲ್ಲಿ 2,713 ಟಿಕೆಟ್ಗಳನ್ನು ಸೇಲ್ ಮಾಡಿತು.ಸಲ್ಮಾನ್ ಖಾನ್ ಅವರ ‘ಟೈಗರ್ 3’ ಮುಂಗಡ ಬುಕ್ಕಿಂಗ್ನಲ್ಲಿ ದಾಖಲೆ ಮಾಡಿದೆ. ರಿಲೀಸ್ನ ಮೊದಲ ದಿನದ ಟಿಕೆಟ್ ಮಾರಾಟದಲ್ಲಿ ಸುಮಾರು 4.2 ಕೋಟಿ ರೂಪಾಯಿ ಗಳಿಸಿದೆ. ಶಾರುಖ್ ಖಾನ್ ಅವರ ಜವಾನ್ ಮತ್ತು ಪಠಾಣ್ ನಂತರ ಮುಂಗಡ ಟಿಕೆಟ್ ಮಾರಾಟದ ವಿಚಾರದಲ್ಲಿ ‘ಟೈಗರ್ 3’ ಮೂರನೇ ಸ್ಥಾನದಲ್ಲಿದೆ. ಚಿತ್ರವು ನವೆಂಬರ್ 12ರಂದು ತೆರೆ ಕಾಣಲಿದ್ದು, 7,392 ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣಲಿದೆ. ಬಿಡುಗಡೆಯಾದ ಮೊದಲ ದಿನಕ್ಕಾಗಿ 1.42 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಸೇಲ್ ಆಗಿವೆ. ಇದರ ಒಟ್ಟು ಮೊತ್ತ ಸುಮಾರು 4.2 ಕೋಟಿ ರೂ. ಆಗಿದೆ.
ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್ ಬಳಿಕ ಬಿಡುಗಡೆ ಆಗುತ್ತಿರುವ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಯೂನಿವರ್ಸ್ನಲ್ಲಿ 5ನೇ ಚಿತ್ರ ಇದು. ‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿದ್ದರು. ಇದೀಗ ಟೈಗರ್ 3ನಲ್ಲಿ ಕಿಂಗ್ ಖಾನ್ ಎಂಟ್ರಿಯೂ ಇರಲಿದೆ. ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.ಮುಂಗಡ ಬುಕ್ಕಿಂಗ್ ಆಧಾರದ ಮೇಲೆ ಚಲನಚಿತ್ರ ವಿಮರ್ಶಕರೊಬ್ಬರು, ‘ಟೈಗರ್ 3’ ತನ್ನ ಮೊದಲ ದಿನದಂದು 40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ‘ಟೈಗರ್ 3’ ನವೆಂಬರ್ 12 ರಂದು ತೆರೆ ಕಾಣಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ನವೆಂಬರ್ 4ರಿಂದ ಪ್ರಾರಂಭವಾಗಿದೆ. ಟೈಗರ್ 3 ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.