ಮಂಗಳೂರು: ಕರಾವಳಿಯ ಧಾರ್ಮಿಕ ಸ್ಥಳಗಳ ಪ್ರವಾಸದಲ್ಲಿರುವ ಸಚಿವ ಎಚ್.ಡಿ. ರೇವಣ್ಣ ಕಟೀಲು ದೇವಸ್ಥಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ.
ಫೋಟೊ, ವಿಡಿಯೋ ತೆಗೆದ ವೇಳೆ ದಬಾಯಿಸಿದ ರೇವಣ್ಣ ದೇವಸ್ಥಾನದೊಳಗೆ ಅವಾಚ್ಯ ಶಬ್ದ ಬಳಸಿ ಮಾಧ್ಯಮದವರ ಮೇಲೆ ಕಿಡಿ ಕಾರಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾಗ ಪತ್ರಕರ್ತರು ಫೋಟೋ ಹಾಗೂ ವಿಡಿಯೋ ಮಾಡುತ್ತಿದ್ದರು.
ಈ ವೇಳೆ ರೇಗಾಡಿದ ರೇವಣ್ಷ ಪೊಲೀಸರಿಂದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಸದ್ಯ ಈ ವೀಡಿಯೋ ತುಣುಕು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.












