ದೇಶ: ಕುಮಾರ್ ಹಟ್ಟಿ-ನಹಾನ್ ಹೆದ್ದಾರಿಯ ಸಮೀಪವಿರುವ ಬಹುಮಹಡಿ ಕಟ್ಟಡವೊಂದು ಭಾರಿ ಮಳೆಗೆ ಸಿಲುಕಿ ಭಾನುವಾರದಂದು ಕುಸಿತ ಕಂಡಿದೆ. 35 ಮಂದಿ ಯೋಧರು ಸೇರಿದಂತೆ ಅನೇಕ ಮಂದಿ ಸಿಲುಕಿರುವ ಗುಮಾನಿ ವ್ಯಕ್ತವಾಗಿದೆ.
ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲಾನ್ ನಲ್ಲಿ ಕುಸಿದಿರುವ ಈ ಕಟ್ಟಡದಲ್ಲಿ ಸಿಲುಕಿದ್ದ 15 ಮಂದಿ ಯೋಧರನ್ನು ಸದ್ಯ ಬಚಾವ್ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿಯಂತ್ರಣ ತಂಡ(ಎನ್ ಡಿ ಆರ್ ಎಫ್) ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ವಿಪತ್ತು ನಿರ್ವಹಣಾ ಕಾರ್ಯ ಮುಂದುವರೆಸಿದ್ದರು.
ಚಂಡೀಗಢ -ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ರಾತ್ರಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ. ಸೊಲಾನ್ ನಿಂದ ಪರ್ವಾನೋ ಭಾಗದಲ್ಲಿ ಭೂಕುಸಿತ ಸಾಮಾನ್ಯವಾಗಿದೆ, ಚಕ್ಕಿ ಕಾ ಮೋರ್ ನಲ್ಲಿ ಅತ್ಯಧಿಕ ಕುಸಿತ ಕಂಡಿವೆ.