ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಪ್ರಥಮ ವರ್ಷದ ವಾರ್ಷಿಕ ಸಾಮಾನ್ಯ ಸಭೆಯು ಅ.29 ಭಾನುವಾರದಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ, ಉಡುಪಿ ಕಾರ್ಸ್ ನ ಮೊಹಮ್ಮದ್ ಅಶ್ರಫ್ ಇವರು ವಹಿಸಿದ್ದರು.
ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಕಾರ್ಯದರ್ಶಿ ವರದಿ ವಾಚಿಸಿದರು. ಕೋಶಾಧಿಕಾರಿ ಮಂಡಳಿ ಸಭೆಯ ವರದಿ ನೀಡಿದರು.
ಸಂಘದ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಆಜೀವ ಸದಸ್ಯರು ಉಪಸ್ಥಿತರಿದ್ದರು.
ರಜಾಕ್ ಮಾಸ್ಟರ್ ಸ್ವಾಗತಿಸಿ ವಂದಿಸಿ ನಿರೂಪಿಸಿದರು.