ಧರ್ಮಶಾಲಾ, ಹಿಮಾಚಲ ಪ್ರದೇಶ: ಏಕದಿನ ವಿಶ್ವಕಪ್ನಲ್ಲಿ (Cricket World Cup) ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ರನ್ಗಳ ಮಳೆಯೇ ಸುರಿದಿದೆ. ಕಿವೀಸ್ ಬೌಲರ್ಗಳ ಬೆವರಿಳಿಸಿದ ಆಸೀಸ್ ತಂಡ ನಿಗದಿತ 50 ಓವರ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 388 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿಗೆ ಬೃಹತ್ ಟಾರ್ಗೆಟ್ ನೀಡಿದೆ.
ಕಿವೀಸ್ ಬೌಲರ್ಗಳ ಬೇವರಿಳಿಸಿದ ಆರಂಭಿಕರು: ಟಾಸ್ ಗೆದ್ದು ನ್ಯೂಜಿಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದ್ರೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ದಾಳಿಗೆ ಕಿವೀಸ್ ಬೌಲರ್ಗಳ ಬೆಂಡಾದರು. ಕೇವಲ 19 ಓವರ್ಗಳಿಗೆ ಹೆಡ್ ಮತ್ತು ವಾರ್ನರ್ ಮೊದಲ ವಿಕೆಟ್ಗೆ 175 ರನ್ ಕಲೆ ಹಾಕಿದ್ದರು. ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟ್ರಾವಿಸ್ ಹೆಡ್ (67 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್, 109 ರನ್) ಶತಕ ಗಳಿಸಿ ಮಿಂಚಿದರು. ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್, 81 ರನ್) ನಿರ್ಣಾಯಕ ಇನಿಂಗ್ಸ್ ಆಡಿದರು. ಆದರೆ ಕಿವೀಸ್ ಬೌಲರ್ಗಳ ವಿರುದ್ಧ ಅಬ್ಬರಿಸಿ ವಾರ್ನರ್ ಪೆವಿಲಿಯನ್ಗೆ ಮರಳಿದ್ದರು.
ಬಳಿಕ ಬಂದ್ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಪೆವಿಲಿಯನ್ ಹಾದಿ ಹಿಡಿದರು. ಒಟ್ನಲ್ಲಿ ನಿಗದಿತ 50 ಓವರ್ಗಳಿಗೆ ಆಸೀಸ್ ತಂಡ 10 ವಿಕೆಟ್ಗಳ ನಷ್ಟಕ್ಕೆ 388 ರನ್ಗಳನ್ನು ಕಲೆ ಹಾಕಿದೆ. ನ್ಯೂಜಿಲೆಂಡ್ ಬೌಲರ್ಗಳಾದ ಗ್ಲೆನ್ ಫಿಲಿಪ್ಸ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಮೂರು ವಿಕೆಟ್ಗಳು ಪಡೆದ್ರೆ, ಸ್ಯಾಂಟ್ನರ್ 2 ವಿಕೆಟ್ ಪಡೆದರು. ಜೇಮ್ಸ್ ನೀಶಮ್ ಮತ್ತು ಮ್ಯಾಟ್ ಹೆನ್ರಿ ತಲಾ ಒಂದೊಂದು ವಿಕೆಟ್ ಕಬಳಿಸಿದರು. ನ್ಯೂಜಿಲೆಂಡ್ ತಂಡ ಆಸೀಸ್ ವಿರುದ್ಧ ಗೆಲ್ಲಲು 389 ರನ್ಗಳ ಗುರಿ ತಲುಪಬೇಕಾಗಿದೆ.ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆಸೀಸ್ ತಂಡವನ್ನು ಕಿವೀಸ್ ಬೌಲರ್ಗಳು ತಡೆಯಲು ಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ನಿಗದಿತ 50 ಓವರ್ಗಳಿಗೆ ಆಸ್ಟ್ರೇಲಿಯಾ ತಂಡ 10 ವಿಕೆಟ್ಗಳ ನಷ್ಟಕ್ಕೆ 388 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದ್ದಾರೆ.
ವಾರ್ನರ್ ಬಳಿಕ ಬಂದ ಆಸೀಸ್ ಬ್ಯಾಟ್ಸ್ಮನ್ಗಳಲ್ಲಿ ಮಿಚೆಲ್ ಮಾರ್ಷ್ (36 ರನ್) ಕೆಲಹೊತ್ತು ಹೋರಾಟ ನಡೆಸಿದರು. ಸ್ಟೀವ್ ಸ್ಮಿತ್ (18 ರನ್) ಮತ್ತು ಲಬುಶಾನೆ (18 ರನ್) ಹೆಚ್ಚು ರನ್ ಗಳಿಸಲಿಲ್ಲ. 40 ಓವರ್ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ಐದು ವಿಕೆಟ್ಗಳ ನಷ್ಟಕ್ಕೆ 292 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್ವೆಲ್ (41 ರನ್), ಇಂಗ್ಲಿಸ್ (38 ರನ್) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್) ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಶ್ರಮ ವಹಿಸಿದರು.