ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಆಯೋಜಿಸಿರುವ ವಿಶ್ವ ಬಂಟರ ಸಮ್ಮೆಳನ-2023 ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್, ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬಂಟರ ಸಂಘದ ಪದಾಧಿಕಾರಿಗಳು, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು, ಬಾರ್ಕೂರು ಸಂಸ್ಥಾನದ ಸಂತೋಷ್ ಭಾರತೀ ಸ್ವಾಮಿಗಳು, ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ, ಶಾಸಕ ಯಶ್ ಪಾಲ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ಉದ್ಘಾಟನೆಗೂ ಮುನ್ನ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕೀಲು ಕುದುರು, ಹುಲಿ ಕುಣಿತ, ಯಕ್ಷಗಾನ ವೇಷಭೂಷಣಗಳು ಮನಸೆಳೆದವು.
ರಾಜ್ಯ, ದೇಶ ಮತ್ತು ವಿದೇಶದ ಬಂಟರ ಸಂಘಗಳು ಮೆರವಣಿಗೆಯಲ್ಲಿ ವಿಭಿನ್ನ ಪೋಷಾಕುಗಳೊಂದಿಗೆ ಭಾಗವಹಿಸಿದವು.