ಬೆಂಗಳೂರು: ನವೆಂಬರ್‌ 19 ರಂದು ‘ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ’ ಆಯೋಜನೆ

ಬೆಂಗಳೂರು: ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್.ಆರ್.ಐ ಬ್ರಿಗೇಡ್ ವತಿಯಿಂದ ನವೆಂಬರ್‌ 19 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಗರದ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌ ನ ಇನ್ಫೋಸಿಸ್‌ ಸಂಸ್ಥೆ ಹತ್ತಿರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನ ಆವರಣದ ಬಿಜಿಎಸ್‌ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಭವನದಲ್ಲಿ ‘ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ’ ವನ್ನು ಆಯೋಜಿಸಲಾಗಿದೆ.

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ನಿರ್ಮಲನಂದನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಬೃಹತ್‌ ಪ್ರಮಾಣದ ಉದ್ಯೋಗ ಮೇಳ ಇದಾಗಿದ್ದು, 5 ಸಂಸ್ಥೆಗಳ ಸಂದರ್ಶನಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉದ್ಯೋಗ ಪಡೆಯಬಹುದು. ಈ ಉದ್ಯೋಗ ಮೇಳದಲ್ಲಿ ಮಹೀಂದ್ರಾ ಫೈನಾನ್ಸ್, ರಿಲಯನ್ಸ್‌ ಮಾರ್ಟ್‌ ಮ್ಯಾನ್ ಪವರ್ ಗೂಪ್ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಎಸ್‌ಎಸ್‌ಎಲ್‌ಸಿ, ಪಿಯುಸಿ, ಹಾಗೂ ಯಾವುದೇ ಸ್ನಾತಕೋತ್ತರ ಪದವಿ (ಪಾಸ್‌/ಫೇಲ್‌), ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್‌, ಎನ್‌ಟಿಟಿ, ಟಿಸಿಎಚ್‌, ಬಿ.ಇಡಿ, ಎಂ.ಇಡಿ ಪದವೀಧರರಾಗಿರಬಹುದು.

ಹೌಸ್‌ ಕೀಪಿಂಗ್, ಸೇಲ್ಸ್‌ ಬಾಯ್‌, ಆಫೀಸ್‌ ಅಸಿಸ್ಟೆಂಟ್‌, ಚಾಲಕರು, ಡೆಲಿವರಿ ಬಾಯ್‌, ಸೆಕ್ಯೂರಿಟಿ ಸರ್ವೀಸಸ್‌, ಡಿಟಿಪಿ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಟೀಚಿಂಗ್‌, ಟ್ರೈನಿಂಗ್‌, ಕಲೆಕ್ಷನ್‌, ಕೌಂಟರ್‌ ಸೇಲ್ಸ್‌, ಮಾರ್ಕೆಟಿಂಗ್‌, ಟೆಲಿ ಮಾರ್ಕೆಟಿಂಗ್‌ , ಇನ್ಶೂರೆನ್ಸ್‌, ಬ್ಯಾಂಕಿಂಗ್‌, ಆಡಳಿತ, ಬಿಪಿಒ, ಕೆಪಿಒ ಮತ್ತು ಎಂಟಿ ಇತ್ಯಾದಿ ಉದ್ಯೋಗಾವಕಾಶಗಳಿವೆ.

ಹೆಚ್ಚಿನ ಮಾಹಿತಿಗಾಗಿ: ಮೋಹನ್: 9686564192, ರವಿಚಂದ್ರ: 9886943810, ಕಿರಣಕುಮಾರ: 8660569173 ಇವರನ್ನು ಸಂಪರ್ಕಿಸಬಹುದು.