ವಿಜಯ್ ಕೊಡವೂರು ಅವರ ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ: ಯಶ್ ಪಾಲ್ ಸುವರ್ಣ

ಉಡುಪಿ: ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಅಪ್ಪು ಅಭಿಮಾನಿಗಳ ಬಳಗ ಉಡುಪಿ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಕ್ಷಯ ಮುಕ್ತ ಭಾರತದ ಯೋಜನೆ ಅಂಗವಾಗಿ ಕ್ಷಯ ಮುಕ್ತ ಉಡುಪಿ ನಗರಕ್ಕಾಗಿ ಉಡುಪಿ ನಗರದಲ್ಲಿನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ, ದಿವ್ಯಾಂಗರಿಗೆ ಧನ ಸಹಾಯ, ಗಾಲಿಕುರ್ಚಿ ವಿತರಣೆ, ವಾಕರ್ ವಿತರಣೆ ಕಾರ್ಯಕ್ರಮವು ಉಡುಪಿಯ ಟೌನ್ ಹಾಲ್ ನಲ್ಲಿ ಅ.23 ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯಶ್ ಪಾಲ್ ಸುವರ್ಣ ಮಾತನಾಡಿ, ಕೊಡವೂರು ವಾರ್ಡಿನಲ್ಲಿ ವಿಜಯ್ ಕೊಡವೂರು ಅವರ ಮುಂದಾಳತ್ವದಲ್ಲಿ ಅನೇಕ ಕಾರ್ಯಕ್ರಮಗಳು ಜನ ಮೆಚ್ಚುಗೆ ಪಡೆಯುತ್ತಿದ್ದು ಅವರ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳು ಮುಂದೆಯೂ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಸಂಯೋಜಕ ಕೆ ವಿಜಯ್ ಕೊಡವೂರು ಮಾತನಾಡಿ, ಕ್ಷಯ ಮುಕ್ತ ಭಾರತದ ಕನಸು ಕಂಡ ನರೇಂದ್ರ ಮೋದಿಯವರ ಚಿಂತನೆ ಮತ್ತು ಯೋಜನೆಗಳನ್ನು ಉಡುಪಿ ನಗರದಲ್ಲಿ ಅನುಷ್ಠಾನಿಸಬೇಕೆಂದು ಅಪ್ಪು ಅಭಿಮಾನಿ ಬಳಗ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಈ ಮೂರು ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 6 ತಿಂಗಳ ಕಾಲ ಉಡುಪಿ ನಗರದಲ್ಲಿ ಟಿಬಿ ಸೊಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಆಹಾರದ ಕಿಟ್ ವಿತರಣೆ ಮಾಡುತ್ತಾ ಟಿಬಿ ಮುಕ್ತ ಉಡುಪಿ ನಗರವನ್ನಾಗಿಸುವ ಸಂಕಲ್ಪವಿದೆ. ಈ ಯೋಜನೆಗೆ ಎಲ್ಲಾ ನಾಗರಿಕರ ಸಹಾಯದ ಅವಶ್ಯಕತೆ ಇದೆ. ಸ್ವಸ್ಥ ಆರೋಗ್ಯವನ್ನು ಹೊಂದಿರುವ ನಾಗರಿಕರೆಲ್ಲರೂ ಕಾರಣಾಂತರಗಳಿಂದ ಅಸ್ವಸ್ಥರಾದವರಿಗೆ ಶುಭದಿನಗಳಂದು ಔಷಧ ಹಾಗೂ ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಅವರಿಗೆ ಸಹಾಯ ಹಸ್ತ ಚಾಚಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್ ಕೊಪ್ಪಳ ತೋಟ, ಲಯನ್ಸ್ ಮತ್ತು ಲಿಯೋ ಕ್ಲಬ್ ಅಧ್ಯಕ್ಷ ಲಿಯೋ ರಮೇಶ್ ಕುಂದರ್, ಉದ್ಯಮಿಗಳಾದ ಅಜಯ್ ಶೆಟ್ಟಿಗಾರ್, ಪತ್ರಕರ್ತ ಜನಾರ್ಧನ ಕೊಡವೂರು, ಅಯ್ಯಪ್ಪ ಸೇವಾ ಸಮಿತಿಯ ರಾಧಾಕೃಷ್ಣ ಮೆಂಡನ್, ಪಿ. ಇ.ಎಸ್. ಫೌಂಡೇಶನ್ ಉಡುಪಿ ಇದರ ಕಾರ್ಯದರ್ಶಿ ಜಗದೀಶ್ ಭಟ್, ಮತ್ತಿತರರು ಹಾಜರಿದ್ದರು.

ಸಮಾಜ ಸೇವಕ ಅಖಿಲೇಶ್ ಎ ನಿರೂಪಿಸಿದರು.