ದಸರಾ : ಆಹಾರ ದಸರಾದಲ್ಲಿ ಬುಡಕಟ್ಟು ಜನಾಂಗದ ‘ಬಂಬೂ ಬಿರಿಯಾನಿ’ ಘಮ

ಮೈಸೂರು: ದಸರಾ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದ ಬಂಬೂ ಬಿರಿಯಾನಿ ಜನರ ಗಮನ ಸೆಳೆಯುತ್ತಿದೆ. ಇದು ಆರೋಗ್ಯಕ್ಕೆ ಹೇಗೆ ಉಪಕಾರಿ ಎಂಬ ಬಗ್ಗೆ ಬುಡಕಟ್ಟು ಜನಾಂಗದ ಕೃಷ್ಣಯ್ಯ ಬುಡಕಟ್ಟು ಜನಾಂಗದ ಮೂಲ ಆಹಾರ ಬಂಬೂ ಬಿರಿಯಾನಿ. ಹೇಗೆ ತಯಾರು ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಬಂಬೂ ಬಿರಿಯಾನಿ ತಯಾರಿಕೆ: ರೆಡಿ ಮಾಡಿಕೊಂಡ ಬಿದಿರಿನ ಬಂಬನ್ನು ಸ್ವಚ್ಛವಾಗಿ ತೊಳೆದಕೊಳ್ಳಬೇಕು. ಅಕ್ಕಿ, ಚಿಕನ್, ಮಾಸಾಲೆ, ಕಾಡು ಅರಿಶಿಣ, ಕಾಡು ಶುಂಠಿ, ಕಾಡು ಕೊತ್ತಂಬರಿ, ಕಾಡು ಕರಿಬೇವಿನಸೊಪ್ಪು ಮಿಶ್ರಣ ಮಾಡಬೇಕು. ನಂತರ ಬಂಬಿಗೆ ತುಂಬಿ, ಮೇಲ್ಭಾಗದಲ್ಲಿ ಮುತ್ತುಗದ ಎಲೆಯಿಂದ ಬಂಬನ್ನು ಮುಚ್ಚಿ, ಮೇಲ್ಭಾಗದಲ್ಲಿ ಬಿರಡೆ ಆಕಾರದಿಂದ ಕ್ಲೋಸ್ ಮಾಡಲಾಗುತ್ತದೆ. ಸೌದೆಗಳಿಂದ ಅರ್ಧ ಗಂಟೆಗಳ ಕಾಲ ಬೆಂಕಿಯಲ್ಲಿ ಸುಟ್ಟು, ಹೊರತೆಗೆದಾಗ ಹತ್ತು ನಿಮಿಷಗಳ ಕಾಲ ಬಂಬಿನಲ್ಲಿ ರೆಡಿಯಾದ ಬಿರಿಯಾನಿಯನ್ನು ತಣ್ಣಗಾಗಲು ಬಿಡಬೇಕು. ಬಳಿಕ ಜನರಿಗೆ ನೀಡುತ್ತೇವೆ ಎಂದು ಕೃಷ್ಣಯ್ಯ ವಿವರಿಸಿದರು.

ಬಂಬು ಬಿರಿಯಾನಿಯಲ್ಲಿ ರೋಗನಿರೋಧಕ ಶಕ್ತಿ: ಬಂಬೂ ಬಿರಿಯಾನಿ ಆರ್ಗ್ಯಾನಿಕ್ ಆಗಿದೆ. ಯಾವುದೇ ಎಣ್ಣೆಯ ಪದಾರ್ಥಗಳನ್ನು ಹೀರಿಕೊಳ್ಳುವುದಿಲ್ಲ. ಎಣ್ಣೆಯಂಶ ಇದ್ದರೂ ಅದನ್ನು ಹೊರಹಾಕುತ್ತದೆ. ಎಣ್ಣೆ ಇಲ್ಲದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಅದು ದೇಹದ ರಕ್ತವನ್ನು ಶುದ್ಧೀಕರಿಸುತ್ತದೆ. ಅಸ್ತಮಾ ಇರುವವರಿಗೂ ಇದು ತುಂಬಾ ಒಳ್ಳೆಯ ಆಹಾರ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಅವರು ತಿಳಿಸಿದರು.

ಬುಡಕಟ್ಟು ಜನರ ಆಹಾರ ಬಂಬೂ ಬಿರಿಯಾನಿ ಸವಿದ ಸ್ವಾದ ಪ್ರಿಯರು
ಬಂಬೂ ಬಿರಿಯಾನಿಯ ಹಿನ್ನೆಲೆ: ಆದಿವಾಸಿಗಳಿಗೆ ತಮ್ಮ ಆಹಾರವನ್ನು ಬೇಯಿಸಿಕೊಳ್ಳಲು ಪುರಾತನ ಕಾಲದಲ್ಲಿ ಪಾತ್ರೆ, ಪಗಡೆಗಳು ಇರುತ್ತಿರಲಿಲ್ಲ. ಆಗ ಕಾಡಿನಲ್ಲಿ ಸಿಗುವ ಬಿದಿರಿನ ಬಂಬ್ ಕಟ್ ಮಾಡಿ ಅಡಿಗೆ ಮಾಡಿಕೊಳ್ಳುತ್ತಿದ್ದರು. ಅದು ಆರೋಗ್ಯಕರವಾಗಿತ್ತು. ಅದೇ ಬಂಬೂ ಬಿರಿಯಾನಿಯನ್ನು ಆದಿವಾಸಿಗಳೂ ತಾವು ಕಾಡು ಪ್ರಾಣಿಗಳನ್ನು ಭೇಟಿ ಮಾಡಿ, ಅವುಗಳನ್ನು ಹಸಿಯಾಗಿ ತಿನ್ನುತ್ತಿದ್ದರು. ಕ್ರಮೇಣ ಅವುಗಳನ್ನು ಬೇಯಿಸಿ ತಿನ್ನಲಾರಂಭಿಸಿದಾಗ, ಬಂಬೂ ಬಳಸಿ ಆಹಾರ ತಯಾರಿಸುತ್ತಿದ್ದರು. ಅದನ್ನು ಮೂಲವಾಗಿಟ್ಟುಕೊಂಡು ಈಗ ಬಂಬೂ ಬಿರಿಯಾನಿ ತಯಾರಿಸುತ್ತಿದ್ದೇವೆ ಎಂದು ಕೃಷ್ಣಯ್ಯ ಈಟಿವಿ ಹೇಳಿದರು.

ಆಧುನಿಕ ಯುಗದಲ್ಲಿ ಜನರು ನಮ್ಮ ಪೂರ್ವಜರು ಬಳಸುತ್ತಿದ್ದ ಆಹಾರ ಪದ್ಧತಿಗೆ ಮರಳುತ್ತಿದ್ದಾರೆ. ಇದಕ್ಕೆ ನಿದರ್ಶನ ಮೈಸೂರಿನ ದಸರಾ ಆಹಾರ ಮೇಳ. ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಸ್ಕೌಟ್ಸ್ ಆಯಂಡ್ ಗೈಡ್ಸ್ ಮೈದಾನದ ಮಳಿಗೆಯಲ್ಲಿರುವ ಬುಡಕಟ್ಟು ಆಹಾರ ಬಂಬೂ ಬಿರಿಯಾನಿ ಸವಿಯಲು ನಗರದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.