ಯಂಗ್​, ಲ್ಯಾಥಮ್​, ಫಿಲಿಫ್ಸ್​ ಅರ್ಧಶತಕದಾಟ: ಆಫ್ಘನ್ನರಿಗೆ 289 ರನ್​ಗಳ ಗುರಿ : ವಿಶ್ವಕಪ್​ ಕ್ರಿಕೆಟ್

ಚೆನ್ನೈ (ತಮಿಳುನಾಡು): ಇಂಗ್ಲೆಂಡ್​​ ವಿರುದ್ಧ ಪ್ರಬಲ ಬೌಲಿಂಗ್​ ದಾಳಿಯಿಂದ ಗೆಲುವು ದಾಖಲಿಸಿದ್ದ ಅಫ್ಘಾನ್​ ಚೆನ್ನೈನ ಚೆಪಾಕ್​ ಪಿಚ್​ನಲ್ಲಿ ಕಿವೀಸ್​ಗೆ ಆರಂಭಿಕ ಆಘಾತ ನೀಡಿತು.ಇಂಗ್ಲೆಂಡ್​ ಮಣಿಸಿದ ಅಫ್ಘಾನಿಸ್ತಾನ ಚೆನ್ನೈನ ಚೆಪಾಕ್​ ಸ್ಪಿನ್​ ಟ್ರ್ಯಾಕ್​ನಲ್ಲಿ ನ್ಯೂಜಿಲ್ಯಾಂಡ್​ ಎದುರಿಸಿದ್ದು, ಮೊದಲು ಬ್ಯಾಟ್​ ಮಾಡಿದ ಕಿವೀಸ್​ 288 ರನ್​ ಗಳಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕಿವೀಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಬೌಲಿಂಗ್​ ಶಕ್ತಿಯಿಂದ ಇಂಗ್ಲೆಂಡ್​ ಮಣಿಸಿದ್ದ ಅಫ್ಘಾನಿಸ್ತಾನದ ಬೌಲರ್​ಗಳ ಅದೇ ಆತ್ಮವಿಶ್ವಾಸದಲ್ಲಿ ಕಾಣಿಸಿಕೊಂಡರು. ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಶತಕ ಗಳಿಸಿದ್ದ ಡೆವೊನ್ ಕಾನ್ವೇ (20) ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್​ಗೆ ರಚಿನ್ ರವೀಂದ್ರ ಮತ್ತು ಇನ್ನೋರ್ವ ಆರಂಭಿಕ ಆಟಗಾರ ವಿಲ್​ ಯಂಗ್​ 79 ರನ್​ಗಳ ಜೊತೆಯಾಟವಾಡಿದರು. ಆದರೆ, ಕಿವೀಸ್​ನ ಮೂರು ವಿಕೆಟ್​ ಒಮ್ಮೆಲೇ ಪತನವಾಯಿತು.ಆದರೆ ವಿಲ್ ಯಂಗ್, ಟಾಮ್ ಲ್ಯಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅರ್ಧಶತಕ ನೆರವಿನಿಂದ ನ್ಯೂಜಿಲ್ಯಾಂಡ್​ ನಿಗದಿತ ಓವರ್​ ಅಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 288 ರನ್​ ಗಳಿಸಿದೆ. ಆಫ್ಘನ್​​ ತನ್ನ ಜಯದ ಲಯವನ್ನು ಮುಂದುವರೆಸಲು 289 ರನ್​ಗಳ ಕೋಟೆಯನ್ನು ಭೇದಿಸಬೇಕಿದೆ.

ಟಾಮ್ – ಗ್ಲೆನ್ ಶತಕದ ಜೊತೆಯಾಟ: 110 ರನ್​ಗೆ ನಾಲ್ಕು ವಿಕೆಟ್​ ಕಳೆದುಕೊಂಡಿದ್ದ ಕಿವೀಸ್​ಗೆ ನಾಯಕ ಟಾಮ್​ ಲ್ಯಾಥಮ್​ ಮತ್ತು ಗ್ಲೆನ್ ಫಿಲಿಪ್ಸ್​ ಆಸರೆ ಆದರು. ಈ ಜೋಡಿ ತಂಡವನ್ನು ಆತಂಕದಿಂದ ಹೊರ ತಂದಿತು. 110 ರಿಂದ ತಂಡವನ್ನು 254 ವರೆಗೆ 144 ರನ್​ನ ಪಾಲುದಾರಿಕೆಯೊಂದಿಗೆ ಕೊಂಡೊಯ್ಯದರು. ಇಬ್ಬರು ಬ್ಯಾಟರ್​ಗಳು ಅರ್ಧಶತಕ ದಾಖಲಿಸಿ ಸಂಭ್ರಮಿಸಿದರು. ಅಂತಿಮ ಓವರ್​ಗಳಲ್ಲಿ ರನ್​ನ ಗತಿ ಹೆಚ್ಚಿಸಲು ಪ್ರಯತ್ನಿಸಿದ ಜೋಡಿ ವಿಕೆಟ್​ ಕಳೆದುಕೊಂಡಿತು. ಇನ್ನಿಂಗ್ಸ್​ನಲ್ಲಿ ಫಿಲಿಪ್ಸ್​ 80 ಬಾಲ್​ ಆಡಿ 4 ಬೌಂಡರಿ ಮತ್ತು 4 ಸಿಕ್ಸ್​ನಿಂದ 71 ರನ್​ ಗಳಿಸಿದರೆ, ಟಾಮ್​ ಲ್ಯಾಥಮ್​ 74 ಬಾಲ್​ನಿಂದ 3 ಬೌಂಡರಿ ಮತ್ತು 2 ಸಿಕ್ಸ್​ನ ಸಹಾಯದಿಂದ 68 ರನ್​ ಕಲೆಹಾಕಿದರು.

ಕೊನೆಯನ್ನು ಮಾರ್ಕ್ ಚಾಪ್ಮನ್ (25*) ಮತ್ತು ಮಿಚೆಲ್ ಸ್ಯಾಂಟ್ನರ್ (7*) ತಂಡಕ್ಕೆ ದೊಡ್ಡ ಹೊಡೆತಗಳ ಮೂಲಕ ರನ್​ ಸೇರಿಸಿದರು. ಇದರಿಂದ ನ್ಯೂಜಿಲ್ಯಾಂಡ್​ ನಿಗದಿತ ಓವರ್​ ಅಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 288 ರನ್​ ಕಲೆಹಾಕಿತು.ಏಕಾಏಕಿ ಕುಸಿದ ಮಧ್ಯಮ ಕ್ರಮಾಂಕ: ತಂಡದ ಮೊತ್ತ 109 ಆಗಿದ್ದಾಗ ರಚಿನ್​ ರವೀಂದ್ರ (32) ವಿಕೆಟ್​ ಕಳೆದುಕೊಂಡರೆ, 110 ರನ್​ ಆದಾಗ ಅರ್ಧಶತಕ ಗಳಸಿದ್ದ ವಿಲ್ ಯಂಗ್ (54) ಸಹ ಔಟ್​ ಆದರು. ಅವರ ಬೆನ್ನಲ್ಲೇ ಡೇರಿಲ್ ಮಿಚೆಲ್ (1) ಸಹ ಪೆವಿಲಿಯನ್​ ಹಾದಿ ಹಿಡಿದರು. ಮೂರು ವಿಕೆಟ್​ಗಳು ಒಟ್ಟಿಗೆ ಉರುಳಿದ್ದರಿಂದ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ಇಂತಹ ಸಂದರ್ಭದಲ್ಲಿ ಕಮ್​​ಬ್ಯಾಕ್​ ಮಾಡುವಲ್ಲಿ ಎಡವಿತ್ತು. ಆದರೆ, ಕಿವೀಸ್​ನ ಕೆಳ ಕ್ರಮಾಂಕದ ಬ್ಯಾಟರ್​ಗಳು ಆಸರೆ ಆದರು. ಈ ಮೂಲಕ ಗೌರವಯುತ ಮೊತ್ತ ಕಲೆ ಹಾಕುವಲ್ಲಿ ಕಿವೀಸ್​ ಪಡೆ ಯಶಸ್ವಿಯಿತು.