ಉಲ್ಬಣಗೊಂಡ ಇಸ್ರೇಲ್ – ಪ್ಯಾಲೆಸ್ಟೈನ್ ಸಂಘರ್ಷ: ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟಕ್ಕೆ 500 ಬಲಿ

ಟೆಲ್ ಅವಿವ್: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷವು ಉಲ್ಬಣಗೊಳ್ಳುತ್ತಲೇ ಇದ್ದು, ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ನಂತರ ನೂರಾರು ಜನರು ಸಾವನ್ನಪ್ಪಿದ್ದು ಸಾವಿರಾರು ಜನ ಸ್ಥಳಾಂತರಗೊಂಡಿದ್ದಾರೆ. ಮಂಗಳವಾರ ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ್ದು ಸುಮಾರು 500 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಭೀಕರ ದಾಳಿಗಳನ್ನು ವಿಶ್ವವೇ ಖಂಡಿಸಿದೆ. ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಸ್ಫೋಟಗಳಿಗೆ ಇಸ್ರೇಲಿನ ನಿರ್ದಯ ಪ್ರತೀಕಾರವನ್ನು ದೂಷಿಸಿದ್ದರೆ, ಇಸ್ರೇಲ್ ಇದು ಹಮಾಸ್ ನಿಂದ ಗುರಿತಪ್ಪಿದ ದಾಳಿ ಎಂದಿದೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಇಸ್ರೇಲ್ ಭೇಟಿಗೂ ಮುನ್ನ ದಾಳಿ ನಡೆದಿದೆ.

ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟ ಮತ್ತು ಪ್ರಾಣಹಾನಿಯಿಂದ ತಾನು ಆಕ್ರೋಶಗೊಂಡಿದ್ದೇನೆ ಮತ್ತು ತೀವ್ರ ದುಃಖಿತನಾಗಿದ್ದೇನೆ ಎಂದು ಯುಎಸ್ ಅಧ್ಯಕ್ಷ ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ‘ತಕ್ಷಣದ ಮಾನವೀಯ ಕದನ ವಿರಾಮ’ಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷ ಗುಟೆರೆಸ್ ಕರೆ ನೀಡಿದ್ದಾರೆ.