ಬೆಂಗಳೂರು: ಆನೇಕಲ್ನ ಅತ್ತಿಬೆಲೆ ಪಟಾಕಿ ಬೆಂಕಿ ದುರಂತ ಮಾಸುವ ಮುನ್ನವೇ ಮತ್ತೇ ಇಂತಹದೇ ಘಟನೆ ನಡೆದಿದೆ.ಬೆಂಗಳೂರಿನಲ್ಲಿ ಅಗರಬತ್ತಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಜೋಗುಪಾಳ್ಯದ ಪೈಪ್ ಲೈನ್ ರಸ್ತೆಯಲ್ಲಿನ ಅಗರಬತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಢ ಸಂಭವಿಸಿದ್ದು, ಬೆಂಕಿಗೆ 8 ಬೈಕ್ಗಳು ಸುಟ್ಟಿವೆ. ಇಂದುಬೆಳ್ಳಂಬೆಳಗ್ಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಅಗರಬತ್ತಿ ಫ್ಯಾಕ್ಟರಿಗೆ ಹೊತ್ತಿ ಉರಿದ ಘಟನೆ ಜೋಗುಪಾಳ್ಯದ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಅವಘಡದಿಂದಾಗಿ ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್ ಲಿಕ್ವಿಡ್ ಹರಿದು ರಸ್ತೆಗೂ ಬೆಂಕಿ ಹಬ್ಬಿದ್ದು, 8 ಬೈಕ್ ಅಗ್ನಿಗಾಹುತಿಯಾಗಿವೆ.
8 ಬೈಕ್ ಸುಟ್ಟು ಭಸ್ಮ:ತಕ್ಷಣ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ವಾಹನದ ಸಿಬ್ಬಂದಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಉಂಟಾಗಲು ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್ ಲಿಕ್ವಿಡ್ ರಸ್ತೆಗೆ ಹರಿದಿದ್ದರಿಂದ ಬೆಂಕಿ ರಸ್ತೆಗೂ ಹಬ್ಬಿತ್ತು. ಇದರಿಂದಾಗಿ ಫ್ಯಾಕ್ಟರಿ ಎದುರು ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ತಗುಲಿದೆ. ಪರಿಣಾಮವಾಗಿ ರಾಯಲ್ ಎನ್ಫೀಲ್ಡ್, ಪಲ್ಸರ್, ಹೊಂಡಾ ಆಯಕ್ಟಿವಾ ಸ್ಕೂಟರ್ ಸೇರಿದಂತೆ 8 ದ್ವಿಚಕ್ರ ವಾಹನಗಳು ಅಗ್ನಿಗಾಹುತಿಯಾಗಿವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.