ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ. 15 ರಿಂದ 24ರ ವರೆಗೆ ಪಾಡಿಗಾರ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಅ.15 ರಿಂದ ಪ್ರತಿ ದಿನ ಬೆಳಿಗ್ಗೆ 05:30 ಸುಪ್ರಭಾತ ಚಂಡಿಕಾ ಯಾಗ ರಾತ್ರಿ 7.30 ಕ್ಕೆ ಮಹಾಪೂಜೆ, ಹೂವಿನ ಪೂಜೆ, ರಾತ್ರಿ 8.00ಕ್ಕೆ ಕಲ್ಪೋಕ್ತಪೂಜೆ, ನವರಾತ್ರಿ ಉತ್ಸವ, ರಥೋತ್ಸವ. ಅ.16 ರಂದು ಬೆಳಿಗ್ಗೆ 7ಕ್ಕೆ ಕದಿರು ಕಟ್ಟುವುದು, ಅ.19 ರಂದು ಲಲಿತಾ ಪಂಚಮಿ, ಅ.20 ರಂದು ಶಾರದಾ ಪೂಜೆ ಆರಂಭ, ಅ. 22ರಂದು ದುರ್ಗಾಷ್ಟಮಿ ಮಹಾ ಚಂಡಿಕಾ ಯಾಗ, ಅ.23ರಂದು ರಾತ್ರಿ ಶಾರದಾ ವಿಸರ್ಜನೆ, ಕನ್ನಿಕಾ ಪೂಜೆ, ಮಹಾಮಂತ್ರಾಕ್ಷತೆ, ಅ.24ರಂದು ವಿಜಯದಶಮಿ ಆಚರಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|ಕಟ್ಟೆರವಿರಾಜ ವಿ. ಆಚಾರ್ಯ ತಿಳಿಸಿದ್ದಾರೆ.