ಪಡುಬಿದ್ರೆ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು
ಅ. 15 ರಿಂದ 24 ರವರೆಗೆ ಪ್ರತೀ ವರ್ಷದಂತೆ ಭಕ್ತಾದಿಗಳ ಆಸ್ತಿಕರ ಸಹಕಾರದೊಂದಿಗೆ ವೈಭವದಿಂದ ನಡೆಯಲಿರುವುದು. ಭಕ್ತಾದಿಗಳು ಈ ಪರ್ವ ಕಾಲದಲ್ಲಿ ಶ್ರೀ ದೇವಿಯ ದರ್ಶನ ಮಾಡಿ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಿಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಾಣೆ ತಿಳಿಸಿದೆ.
ನವರಾತ್ರಿ ಕಾರ್ಯಕ್ರಮಗಳು
ಪ್ರತೀದಿನ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8.00ಕ್ಕೆ ನವರಾತ್ರಿ ಪೂಜೆ ನಡೆಯಲಿರುವುದು.
15/10/2023 ಆದಿತ್ಯವಾರ ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿಯಾಗ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ನವರಾತ್ರಿ ಪೂಜೆ ದಿ| ಲಕ್ಷ್ಮೀನಾರಾಯಣ ಭಟ್ ಮತ್ತು ಧರ್ಮಪತ್ನಿ ದಿ| ಗುಲಾಬಿ ಅಮ್ಮನವರ ಸ್ಮರಣಾರ್ಥ, ಮಕ್ಕಳು ಮತ್ತು ಮೊಮ್ಮಕ್ಕಳಿಂದ
16/10/2023 ಸೋಮವಾರ ಲಕ್ಷ್ಮೀ ಹೃದಯ ಹೋಮ, ಮಹಾಪೂಜೆ, ಅನ್ನಸಂತರ್ಪಣೆ
ರಾತ್ರಿ ನವರಾತ್ರಿ ಪೂಜೆ, ನಂದಿಕೂರು ದಿ| ಸಂಜೀವರಾಯರ ಮನೆಯವರಿಂದ
17/10/2023 ಮಂಗಳವಾರ ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಯಾಗ, ಮಹಾಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ದಿ| ಶಾರದಾ ಹೆಚ್.ವಿ.ನರಸಿಂಹರಾವ್ ಸ್ಮರಣಾರ್ಥ ಕೊಳಚೂರು ಸುಕುಮಾರ್ ರಾವ್ ರವರಿಂದ ಸಮಾರಾಧನೆ: ಕೆಲ್ಲಾರು ಶ್ರೀಮತಿ ದೇವಕು ಶೆಡ್ತಿ ಮನೆಯವರಿಂದ, ಕನ್ನಿಕಾಪೂಜೆ: ಅಡ್ವೆ ಕಂಕಣಗುತ್ತು ಕುಟುಂಬಸ್ಥರಿಂದ, ನವರಾತ್ರಿ ಪೂಜೆ
18/10/2023 ಬುಧವಾರ ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ ಅನ್ನಸಂತರ್ಪಣೆ: ದಿ| ಯು.ಮೋಹನರಾವ್ ಚೆನ್ನೈ ಇವರ ಸ್ಮರಣಾರ್ಥ ಮೊಮ್ಮಗ ತೇಜಸ್ ರವರಿಂದ, ಸಮಾರಾಧನೆ. ನವರಾತ್ರಿ ಪೂಜೆ.ಅಡ್ವೆ ತೆಂಕುಮನೆ ಕುಟುಂಬಸ್ಥರು ಹಾಗೂ ಪಡುಮನೆ ಕುಟುಂಬಸ್ಥರಿಂದ
19/10/2023 ಗುರುವಾರ ಲಲಿತ ಪಂಚಮಿ, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ, ಅನ್ನಸಂತರ್ಪಣೆ,
ರಾತ್ರಿ ನವರಾತ್ರಿ ಪೂಜೆ: ಕಡ್ಸಲೆಗುತ್ತು ದಿ| ರಾಮಕೃಷ್ಣರಾಯರ ಮಕ್ಕಳಿಂದ
20/10/2023 ಶುಕ್ರವಾರ ಮೂಲ ನಕ್ಷತ್ರ, ಶ್ರೀ ಸೂಕ್ತ ಹೋಮ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ನವರಾತ್ರಿ ಪೂಜೆ, ಶ್ಯಾನ್ ಭೋಗ ಶ್ರೀನಿವಾಸ ರಾಯರಿಂದ ರಾತ್ರಿ ರಂಗಪೂಜೆ
21/10/2023 ಶನಿವಾರ ಶ್ರೀ ಸೂಕ್ತ ಹೋಮ, ವನದುರ್ಗಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ: ಕೆಮ್ಮುಂಡೆಲು ಜೆನ್ನಿಗಳ ಮನೆಯವರಿಂದ, ರಾತ್ರಿ ನವರಾತ್ರಿ ಪೂಜೆ.
22/10/2023 ಆದಿತ್ಯವಾರ “ದುರ್ಗಾಷ್ಟಮಿ”, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ ಅನ್ನಸಂತರ್ಪಣೆ. ರಾತ್ರಿ ನವರಾತ್ರಿ ಪೂಜೆ, ಅಡ್ವೆ ಜೆನ್ನಿಗಳ ಮನೆಯವರಿಂದ, ರಾತ್ರಿ ರಂಗಪೂಜೆ.
23/10/2023 ಸೋಮವಾರ “ಮಹಾನವಮಿ”, ಸಾರ್ವಜನಿಕ ಚಂಡಿಕಾಯಾಗ, ಗಂಟೆ 10.00ಕ್ಕೆ ಪೂರ್ಣಾಹುತಿ. ಮಹಾಪೂಜೆ ಸಮಾರಾಧನೆ: ಅಡ್ವೆ ಅರಂತಡೆಯವರಿಂದ ಮಧ್ಯಾಹ್ನ 1.00ಗಂಟೆಗೆ ಭೂರಿ ಭೋಜನ: ರಾತ್ರಿ ನವರಾತ್ರಿ ಪೂಜೆ, ರಂಗಪೂಜೆ, ಮಹಾಮಂತ್ರಾಕ್ಷತೆ ಫಲಹಾರ ವ್ಯವಸ್ಥೆ: ಅನುವಂಶಿಕ ಅರ್ಚಕ: ಕಟ್ಟೆಮನೆ ದಿ| ಎನ್.ಕೆ.ಅನಂತರಾಮ ಭಟ್ಟರ ಸ್ಮರಣಾರ್ಥ ಸಹೋದರ ಸಹೋದರಿಯರಿಂದ ಹಾಗೂ ಮಕ್ಕಳಿಂದ.
24/10/2023 ಸೋಮವಾರ “ಮಹಾನವಮಿ”, ಸಾರ್ವಜನಿಕ ಚಂಡಿಕಾಯಾಗ, ಗಂಟೆ 10.00ಕ್ಕೆ ಪೂರ್ಣಾಹುತಿ. ಮಹಾಪೂಜೆ. ಸಮಾರಾಧನೆ: ಅಡ್ವೆ ಅರಂತಡೆಯವರಿಂದ ಮಧ್ಯಾಹ್ನ 1.00ಗಂಟೆಗೆ ಭೂರಿ ಭೋಜನ: ರಾತ್ರಿ ನವರಾತ್ರಿ ಪೂಜೆ, ರಂಗಪೂಜೆ, ಮಹಾಮಂತ್ರಾಕ್ಷತೆ ಭಟ್ಟರ ಸ್ಮರಣಾರ್ಥ ಸಹೋದರ ಸಹೋದರಿಯರಿಂದ ಹಾಗೂ ಮಕ್ಕಳಿಂದ.
24/10/2023 ಮಂಗಳವಾರ ವಿಜಯದಶಮಿ, ಮಹಾಪೂಜೆ, ಅನ್ನಸಂತರ್ಪಣೆ, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ: ಕೆಲ್ಲಾರು ‘ ಶ್ರೀ ದುರ್ಗಾ’ ಶ್ರೀಮತಿ ಸರೋಜಿನಿ ವಿಠಲ ಶೆಟ್ಟಿ ಇವರ ಮಕ್ಕಳಿಂದ
ಸಾಂಸ್ಕೃತಿಕ ಕಾರ್ಯಕ್ರಮಗಳು
15/10/2023 ಆದಿತ್ಯವಾರ ಬೆಳಿಗ್ಗೆ 9.00ಕ್ಕೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ “ಬೇಡರ ಕಣ್ಣಪ್ಪ”
ಸಂಜೆ 4:30ಕ್ಕೆ ಯಕ್ಷ ಕದ್ರಿ ಮಹಿಳಾ ಬಳಗ ಇವರಿಂದ ಯಕ್ಷಗಾನ ತಾಳಮದ್ದಳೆ, ಪ್ರಸಂಗ: “ಗದಾಯುದ್ಧ”
(ನಿರ್ದೇಶನ: ರಾಮಚಂದ್ರ ರಾವ್, ಎಲ್ಲೂರು)
16/10/2023 ಸೋಮವಾರ ಬೆಳಿಗ್ಗೆ 9.00ಕ್ಕೆ ಬ್ರಹ್ಮ ಬೈದರ್ಕಳ ಭಜನಾ ಮಂಡಳಿ ಅಡ್ವೆ ಇವರಿಂದ ಭಜನೆ ಹಾಗೂ ಪ್ರಸಿದ್ಧ ಗಾಯಕ ಗಿರಿಧರ್ ಹಾಗೂ ವಸುಧಾ ಗಿರಿಧರ್ ಬೆಂಗಳೂರು ಇವರಿಂದ ,”ದಾಸ ಸಿಂಚನ” ಸಂಜೆ 4:30ಕ್ಕೆ ಶ್ರೀ ಭ್ರಾಮರಿ ಕಲಾವೃಂದ ಅಶೋಕನಗರ ಮಂಗಳೂರು ಇದರ ಮಹಿಳಾ ಸದಸ್ಯಯರಿಂದ ಯಕ್ಷಗಾನ ತಾಳಮದ್ದಾಳೆ “ಗಿರಿಜಾ ಕಲ್ಯಾಣ”
17/10/2023 ಮಂಗಳವಾರ ಬೆಳಿಗ್ಗೆ 9.00ಕ್ಕೆ ಉದಯಾದ್ರಿ ಭಜನಾ ಮಂಡಳಿ ಪಡುಬಿದ್ರಿ ಹಾಗೂ ಮಂಜುಶ್ರೀ ಬಳಗ ಕದ್ರಿ ಮಂಗಳೂರು ಇವರಿಂದ “ಭಜನಾಮೃತ” ಸಂಜೆ 4:30ಕ್ಕೆ ಯಕ್ಷ ಮಂಜುಳಾ ಕದ್ರಿ ಇದರ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ “ಗರುಡ ಗರ್ವ ಭಂಗ”
18/10/2023 ಬುಧವಾರ ಬೆಳಗ್ಗೆ 9.00ಕ್ಕೆ ನವಶಕ್ತಿ ಭಜನಾ ಮಂಡಳಿ ಪಡುಬಿದ್ರಿ ಹಾಗೂ ಶಿವಳ್ಳಿ ಸ್ಪಂದನಾ ಮಂಗಳಾದೇವಿ ವಲಯ ಮಂಗಳೂರು ಇವರಿಂದ “ನಾಮ ಸಂಕೀರ್ತನೆ” ಸಂಜೆ 4:30ಕ್ಕೆ ನವದುರ್ಗ ಭಜನಾ ಮಂಡಳಿ ಹೆಜಮಾಡಿ ಹಾಗೂ ಆನಂದ ಭೈರವಿ ಬಂಟರ ಸಂಘ ಪಡುಬಿದ್ರೆ ಮಹಿಳಾ ವಿಭಾಗದವರಿಂದ “ಭಜನೆ”
19/10/2023 ಗುರುವಾರ ಬೆಳಿಗ್ಗೆ 9.00ಕ್ಕೆ ಉಮೇಶ್ ನಾಯಕ್ ತರಂಗಿಣಿ ಸಂಗೀತ ಶಾಲೆ ಮಂಗಳೂರು ಇವರ ಶಿಷ್ಯರಿಂದ “ವೇಣುವಾದನ” ಸಂಜೆ 4.30ಕ್ಕೆ ಶ್ರೀಮತಿ ವಿಜಯವಲ್ಲಿ ಆರ್. ರಾವ್ ಹೆಜಮಾಡಿ ಇವರ ಶಿಷ್ಯ ವೃಂದದಿಂದ ಹಾಗೂ ಕುಮಾರಿ ಅದಿತಿ ಪ್ರಮೋದ್ ರಾವ್, ಕುಮಾರಿ ಮಹತಿ ಪ್ರಮೋದ್ ರಾವ್ ಉರ್ವ ಮಂಗಳೂರು ಇವರಿಂದ “ಸಂಗೀತ ಸಿಂಚನ”
20/10/2023 ಶುಕ್ರವಾರ ಬೆಳಿಗ್ಗೆ 9.00ಕ್ಕೆ ವಿದುಷಿ ಡಾ|ಸುಚಿತ್ರಾ ಹೊಳ್ಳ ಪುತ್ತೂರು ಇವರಿಂದ “ಶಾಸ್ತ್ರೀಯ ಸಂಗೀತ” ಸಂಜೆ 4.00ಕ್ಕೆ ಶ್ರೀ ದುರ್ಗಾ ಮಕ್ಕಳ ಕುಣಿತ ಭಜನಾ ಮಂಡಳಿ ನಂದಿಕೂರು ಇವರಿಂದ “ನಲಿದು ಪಾಡುವ” ಹಾಗೂ ವಿದುಷಿ ಶ್ರೀಮತಿ ಲತಾ ಶಶೀಧರನ್ ಇವರ ಕಾಸರಗೋಡು ಹಾಗೂ ಕೈಕಂಬ “ನೃತ್ಯಂ” ಶಾಖೆಯ ಶಿಷ್ಯರಿಂದ “ನೃತ್ಯ ವೈಭವ”
21/10/2023 ಶನಿವಾರ ಬೆಳಿಗ್ಗೆ 9.00ಕ್ಕೆ ಶ್ರೀಮತಿ ವಿಜಯ ಡಿ. ಭಟ್ ನಾಧಸುಧಾ ಸಂಗೀತ ಕಲಾಮಂದಿರ ಜೆ.ಪಿ. ನಗರ, ಬೆಂಗಳೂರು ಇವರ ಸಂಗಡಿಗರಿಂದ “ಸಂಗೀತ ಸುಧಾ” ಸಂಜೆ 4.00ಕ್ಕೆ ಪಾಂಡುರಂಗ ಮಹಿಳಾ ಭಜನಾ ಮಂಡಳಿ ಕೆಮ್ಮುಂಡೇಲು ಇವರಿಂದ “ಕುಣಿತ ಭಜನೆ” ಹಾಗೂ ಸ್ಥಳೀಯ ಯುವ ಪ್ರತಿಭೆಗಳಿಂದ “ನಾಟ್ಯ ವೈಭವ”
22/10/2023 ಆದಿತ್ಯವಾರ ಬೆಳಿಗ್ಗೆ 9.00ಕ್ಕೆ ಪ್ರಸಿದ್ಧ ಗಾಯಕಿರಾದ ಕುಮಾರಿ ಅರ್ಚನಾ ಹಾಗೂ ಕುಮಾರಿ ಸಮನ್ವಿ ಉಡುಪಿ ಇವರಿಂದ “ಶಾಸ್ತ್ರೀಯ ಸಂಗೀತ” (ಪ್ರಾಯೋಜಕರು: ವಿ.ಆರ್ ಪೋತಿ ನಾಗರಕೊಯಿಲ್) ಸಂಜೆ 4.00ಕ್ಕೆ ನರೇಂದ್ರ ಅಡ್ವೆ, ರಾಜೇಶ್ ಭಟ್ ನಂದಿಕೂರು “ಗೀತ ಗಾಯನ” ಹಾಗೂ ವಿದುಷಿ ಡಾ. ಭಾಗ್ಯಶ್ರೀ ಕಡಬ ಜಿ. ಶ್ರೀ ನೃತ್ಯಕಲಾಕೇಂದ್ರ ಪಡುಬಿದ್ರೆ ಇವರ ಶಿಷ್ಯ ವೃಂದದಿಂದ ಹಾಗೂ ವಿದ್ವಾನ್ ಶ್ರವಣ್ ಯು. ಎಂ.ಬೆಂಗಳೂರು ಇವರಿಂದ “ನೃತ್ಯ ಸಂಗಮ”
23/10/2023 ಸೋಮವಾರ ಬೆಳಗ್ಗೆ 9.00ಕ್ಕೆ ಪ್ರಸಿದ್ಧ ಗಾಯಕಿ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ “ಭಕ್ತಿ ಗಾನ ಸುಧೆ” ಪ್ರಾಯೋಜಕರು: ಶ್ರೀಮತಿ ಮತ್ತು ಶ್ರೀ ವಿ.ಶೇಖರ್ ಶೆಟ್ಟಿ, ಶಾರದೆ ಕನ್ಸ್ ಟ್ರಕ್ಷನ್, ಪಾದೆಬೆಟ್ಟು , ಪಡುಬಿದ್ರೆ
ಸಂಜೆ 4.00ಕ್ಕೆ ಕದ್ರಿ ಸಹೋದರಿಯರಾದ ಶ್ರೀಮತಿ ಚೈತ್ರ ಶ್ರೇಯಸ್, ಕುಮಾರಿ ವರ್ಷಾ ಅಡಿಗ, ಕುಮಾರಿ ಪ್ರಸೀದ ಧರ್ಮಸ್ಥಳ, ಶ್ರೀಮತಿ ಅನನ್ಯ, ಕುಮಾರಿ ಸಾನ್ವಿ ಇವರಿಂದ “ಸಂಗೀತ ಸುಧೆ”
24/10/2023 ಮಂಗಳವಾರ ಬೆಳಿಗ್ಗೆ 9.00ಕ್ಕೆ ವಿದೂಷಿ ಶ್ರೀಮತಿ ವಾಣಿ ಸತೀಶ್ ಎಲ್ಲೂರು ಇವರ ಶಿಷ್ಯೆ ವೃಂದದಿಂದ “ಭಕ್ತಿ ಗಾನ” ಸಂಜೆ 4.00ಕ್ಕೆ ಅಡ್ವೆ ಲಕ್ಷ್ಮೀಶ ಆಚಾರ್ಯ ಇವರಿಂದ ಪ್ರವಚನ
ತಾ. 28/10/2023ನೇ ಶನಿವಾರ ಕೋಜಾಗರೀ ವ್ರತ, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ, ಅನ್ನಸಂತರ್ಪಣೆ: ಪುರಾಣಿಕ ಚಂದ್ರಶೇಖರ್ ಭಟ್, ನಂದಿಕೂರು – ಇವರಿಂದ. ಇದೇ ದಿನ ವರ್ಷಂಪ್ರತಿ ನಡೆಯುವ “ಭಜನಾ ಮಂಗಲೋತ್ಸವವು” ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಜರಗಲಿರುವುದು.