ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿಗೆ ವಾಪಸ್ ಆಗಿದೆ.ಬೆಳಗ್ಗೆ 05:50 ಕ್ಕೆ ಕೆಐಎಬಿಯಿಂದ ಹುಬ್ಬಳ್ಳಿಗೆ 6E7227 ಇಂಡಿಗೋ ವಿಮಾನ ತೆರಳಿತ್ತು, ಆದರೆ ಹುಬ್ಬಳ್ಳಿಯಲ್ಲಿ ಮಂಜಿನ ಹಿನ್ನೆಲೆ ವಿಮಾನವನ್ನು ಲ್ಯಾಂಡ್ ಮಾಡಲು ಅನಾನುಕೂಲವಾದ್ದರಿಂದ ಇಂಡಿಗೋ ಬೆಂಗಳೂರಿಗೆ ರಿಟರ್ನ್ ಆಗಿದೆ.ಟೈಮಿಂಗ್ಸ್ ಪ್ರಕಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ಬೆಳಗ್ಗೆ 07 ಗಂಟೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು, ಆದರೆ ಸಾಧ್ಯವಾಗದೇ ವಾಪಸ್ ಆಗಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿಗೆ ತೆರಳಿ ಮಂಜಿನ ಹಿನ್ನೆಲೆ ಬೆಂಗಳೂರಿಗೆ ವಾಪಸ್ ಆಗಿದೆ. ಇಂಡಿಗೋ ರಿಟರ್ನ್ ಹಿನ್ನೆಲೆ ಪ್ರಯಾಣಿಕರ ಪರದಾಟ: ವಿಮಾನ ಬೆಂಗಳೂರಿಗೆ ವಾಪಸ್ ಆದ್ದರಿಂದ ಪ್ರಯಾಣಿಕರು ಪರದಾಡಿದರು. ಕೆಲ ಪ್ರಯಾಣಿಕರು ಬೆಂಗಳೂರಿಗೆ ವಾಪಸ್ ಆದರೆ, ಇನ್ನೂ ಕೆಲ ಪ್ರಯಾಣಿಕರು ಬೆಳಗಾವಿ ವಿಮಾನಗಳಲ್ಲಿ ಪ್ರಯಾಣ ಬೆಳೆಸಿದರು.
ಪ್ರತಿದಿನ ದೆಹಲಿಯಿಂದ ಮಧ್ಯಾಹ್ನ 3.45ಕ್ಕೆ ಈ ವಿಮಾನವು ಹೊರಟು ಸಂಜೆ 6.05ಕ್ಕೆ ಸಾಂಬ್ರಾ ವಿಮಾನ ನಿಲ್ದಾಣ ತಲುಪುತ್ತದೆ. ಇಲ್ಲಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ 9 ಗಂಟೆಗೆ ದೆಹಲಿ ತಲುಪಲಿದೆ. ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಂ (ಐಎಲ್ಎಸ್) ವ್ಯವಸ್ಥೆಯನ್ನು ಈ ವಿಮಾನಕ್ಕೆ ಅಳವಡಿಸಿದ್ದು, ಮೋಡ ಕವಿದ ವಾತಾವರಣ, ಮಳೆ ಸೇರಿದಂತೆ ವಿಷಮ ಸ್ಥಿತಿಗಳಲ್ಲೂ ಈ ವಿಮಾನ ಹಾರಾಟ ನಡೆಸಲಿದೆ.
ಈ ಹಿಂದೆಯೂ ಬೆಳಗಾವಿ- ದೆಹಲಿ ನಡುವೆ ನೇರ ವಿಮಾನ ಸೇವೆ ಇತ್ತು. ಆದರೆ, ಕಾರಣಾಂತರಗಳಿಂದ ವಿಮಾನ ಸಂಸ್ಥೆಗಳು ಸಂಚಾರ ಸ್ಥಗಿತಗೊಳಿಸಿದ್ದವು. ಈ ಕಾರಣದಿಂದ ಜನರು ಹುಬ್ಬಳ್ಳಿ ಇಲ್ಲವೇ ಗೋವಾ ವಿಮಾನ ನಿಲ್ದಾಣಗಳಿಂದ ದೆಹಲಿಗೆ ಹೋಗುವ ಅನಿವಾರ್ಯ ಸೃಷ್ಟಿಯಾಗಿತ್ತು. ಆದರೆ ಮೊನ್ನೆ ಪುನರಾರಂಭದಿಂದ ಈಗ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳ ಹಲವು ಪ್ರಯಾಣಿಕರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳು, ಜನತೆಗೆ ಸಂತಸ ತಂದಿದೆ. ಈ ಸೇವೆಯಿಂದ 2 ಗಂಟೆ 20 ನಿಮಿಷದಲ್ಲಿ ಬೆಳಗಾವಿಯಿಂದ ದೆಹಲಿಗೆ ತಲುಪಬಹುದಾಗಿದೆ
ಅಕ್ಟೋಬರ್ 6 ರಿಂದ ಆರಂಭವಾದ ಬೆಳಗಾವಿ-ದೆಹಲಿ ಮಧ್ಯೆಯ ವಿಮಾನಸೇವೆ: ಈಗಾಗಲೇ ಹುಬ್ಬಳ್ಳಿ-ದೆಹಲಿ ಮಧ್ಯೆ ವಿಮಾನ ಸೇವೆಯಿದ್ದು, ಬೆಳಗಾವಿ-ದೆಹಲಿ ಮಧ್ಯೆ ಕೂಡ ಬಂದ್ ಆಗಿದ್ದ ವಿಮಾನ ಸೇವೆ ಪುನರಾರಂಭವಾಗಿದೆ. ಮೊನ್ನೇ ತಾನೇ ಕುಂದಾನಗರದಿಂದ ರಾಷ್ಟ್ರ ರಾಜಧಾನಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಚಾಲನೇ ನೀಡಿ ಆರಂಭಿಸಲಾಯಿತು. ವಿಮಾನದಲ್ಲಿ ಕನ್ನಡದಲ್ಲೇ ಅನೌನ್ಸಮೆಂಟ್ ಮಾಡುವ ಮೂಲಕ ಪ್ರಯಾಣಿಕರನ್ನು ಪೈಲಟ್ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿತ್ತು.