ಕಾರ್ಕಳ; ನಿರಂತರ ಅಪಪ್ರಚಾರದಲ್ಕಿ ತೊಡಗಿರುವವರು ಅನುದಾನಕ್ಕೆ ತಡೆಯೊಡ್ಡುತ್ತಿರುವವರು ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಹೊರಟವರು ಕ್ಷೇತ್ರದ ಅಭಿವೃದ್ದಿಗೆ ಅಡ್ಡಿಯಾಗಿರುವ ವಿಘ್ನ ಸಂತೋಷಿಗಳು. ಕಾಂಗ್ರೆಸ್ ಮತ್ತು ಅವರ ಬಿ ಟೀಂ ಈ ಮೂರು ಕಾರ್ಯವನ್ನು ನಿರಾಯಸವಾಗಿ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಕೌಡೂರು ಹೇಳಿದ್ದಾರೆ.
ವಿಧಾನ ಸಭಾ ಚುನಾವಣೆ ಹೊತ್ತಿಗೆ ಕಾರ್ಕಳಕ್ಕೆ ಬಂದು ಇಡೀ ಕ್ಷೇತ್ರವನ್ನು ಉದ್ಧಾರ ಮಾಡುವುದಾಗಿ ಹೇಳಿದ್ದ ವ್ಯಕ್ತಿ ತಮ್ಮ ಬೆಂಬಲಿಗರೊಂದಿಗೆ ಊರಿಡಿ ಅಲೆಮಾರಿಗಳಂತೆ ಅಲೆದಾಡಿ ಸಾರ್ವಜನಿಕರ ದಿಕ್ಕುತಪ್ಪಿಸಿ,ಅಪಪ್ರಚಾರದಲ್ಲಿ ತೊಡಗಿಸಿಕೊಂಡರು.ಚುನಾವಣೆ ಮುಗಿದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಹೊರಗೆ ನಿಂತು ಅಭಿವೃದ್ದಿಗೆ ನ್ಯಾಯಲಯದಿಂದ ತಡೆಯಾಜ್ಞೆ ತರಲು ಹೊರಟಿದ್ದಾರೆ. ಅವರು ಮತ್ತವರ ಬೆಂಬಲಿಗರು ಕ್ಷೇತ್ರದ ಜನರ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಇದೇ ಬಿ ಟೀಂಗೆ ಸಂಪನ್ಮೂಲ ಒದಗಿಸಿತ್ತು. ಅದೇ ಅಪಪ್ರಚಾರದ ಕೆಲಸವನ್ನು ಕಾಂಗ್ರೆಸ್ಮು ಅವತ್ತು ಮಾಡಿತ್ತು ಈಗಲೂ ಮುಂದುವರೆಸುತ್ತಿದೆ. ಇಬ್ಬರ ಉದ್ದೇಶ ನಿರಂತರ ಅಪಪ್ರಚಾರ, ಸುಳ್ಳು ಹಬ್ಬಿಸುವುದು ಅಭಿವೃದ್ದಿ ತಡೆಯೊಡ್ಡುವುದು, ಕಾಮಗಾರಿ ನಿಲ್ಕಿಸುವುದೇ ಆಗಿದೆ. ಥೀಂ ಪಾರ್ಕ್ ಪೂರ್ಣಕ್ಕೆ ಅನುದಾನ ಬಿಡುಗಡೆಗೆ ಪ್ರಯತ್ನಿಸದೆ ಅನುದಾನಕ್ಕೆ ತಡೆಯೊಡ್ಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಅಭಿವೃದ್ದಿ ವಿರೋಧಿ. ಅದೇ ಕೆಲಸವನ್ನು ಅದು ಚಾಚು ತಪ್ಪದೆ ಪಾಲಿಸುತ್ತಲೇ ಬಂದಿದೆ. ಈಗಲೂ ಅದನ್ಬೆ ಮಾಡುತ್ತಿದೆ ಎಂದರು.
ಪ್ರವಾಸಿ ಕ್ಷೇತ್ರ ಬೈಲೂರಿನ ಪರಶುರಾಮ ಯೋಜನೆ ಮತ್ತು ಅಭಿವೃದ್ದಿ ಇವೆರಡು ವಿಚಾರದಲ್ಲಿ ಅಪಪ್ರಚಾರ ಮಾಡಿ ಯೋಜನೆ ನಿಲ್ಲಿಸಲು ಪ್ರಯತ್ನ ನಡೆಸುತಿದ್ದವರ ವಿರುದ್ದ ಕ್ರಮ ಆಗಲೇಬೇಕು ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರು ಇಂತಹವರ ವಿರುದ್ದ ಎಚ್ಚರಿಕೆಯಿಙದಿರಬೇಕು. ವಿರೋಧಿಸಬೇಕು ಎಂದರು.